ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು: ವೈದ್ಯಕೀಯ ಪರಿಕರ; ತೆರಿಗೆ ವಿನಾಯಿತಿಗೆ ಮನವಿ

Published 4 ಜುಲೈ 2024, 13:56 IST
Last Updated 4 ಜುಲೈ 2024, 13:56 IST
ಅಕ್ಷರ ಗಾತ್ರ

ತಿಪಟೂರು: ವೈದ್ಯಕೀಯ ಸೇವೆ ದೇವರ ಸೇವೆಗೆ ಸಮ. ರೋಗಿ ಯಾವುದೇ ಸ್ಥಿತಿಯಲ್ಲಿದ್ದರೂ ವೈದ್ಯರು ಅವರ ಪ್ರಾಣ ರಕ್ಷಣೆಗೆ ಹೋರಾಡುತ್ತಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ನಾಗರಾಜ ಶೆಟ್ಟಿ ತಿಳಿಸಿದರು.

ನಗರದಲ್ಲಿ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ‘ಉತ್ತಮ ಪಿಜೀಷಿಯನ್’ ಪ್ರಶಸ್ತಿ ಪಡೆದ ಡಾ.ರಕ್ಷಿತ್‍ಗೌಡ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸದ ವೆಚ್ಚ ಅಧಿಕವಾಗಿದೆ. ಸರ್ಕಾರ ವೈದ್ಯಕೀಯ ಪರಿಕರಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವ ಕಾರಣ ಜನರಿಗೆ ಕೈಗೆಟುಕುವ ದರದಲ್ಲಿ ವೈದ್ಯರು ಸೇವೆ ನೀಡುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ವೈದ್ಯಕೀಯ ಪರಿಕರಗಳ ಮೇಲೆ ತೆರಿಗೆ ವಿಧಿಸಬಾರದು ಎಂದರು.

ಸಂಘದ ಸಂಸ್ಥಾಪಕ ಎನ್.ಬಾನುಪ್ರಶಾಂತ್ ಮಾತನಾಡಿ, ಸಂಘವು 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಅಧಿಕಾರಗಳನ್ನು ಗೌರವಿಸುತ್ತ ಬಂದಿದೆ ಎಂದರು.

ಉಪನ್ಯಾಸಕ ರೇಣುಕಯ್ಯ ಮಾತನಾಡಿ, ಅಧಿಕಾರಿಗಳು ಅವರ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಉತ್ತಮ ಸ್ಥಾನ, ಗೌರವ ದೊರೆಯುತ್ತವೆ. ಜನರಿಗೆ ಸೇವೆ ಮಾಡುವ ಅವಕಾಶವೂ ಎಲ್ಲರಿಗೂ ದೊರೆಯುತ್ತದೆ. ಅದನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ಜನಸ್ನೇಹಿಯಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ಬಯಲು ಸೀಮೆ ಸಾಂಸ್ಕೃತಿಕ ಸಾಮಾಜಿಕ ಸಂಘದ ಅಧ್ಯಕ್ಷ ಎಚ್.ಸಿ. ನಾಗಾರಾಜು, ಪ್ರಾಂಶುಪಾಲ ಕೆ.ಎನ್ ರೇಣುಕಯ್ಯ, ಚಿಂತಕ ಉಜ್ಜಜ್ಜಿ ರಾಜಣ್ಣ, ಉದಯರವಿ ಬ್ಯಾಂಕ್ ಅಧ್ಯಕ್ಷ ಕೆ.ಎಂ. ರಾಜಣ್ಣ, ಆರ್.ಎಂ.ಕುಮಾರಸ್ವಾಮಿ ಉಪಸ್ಥಿತರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT