ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ ಪಿಎಸ್‍ಐ ವರ್ಗಾವಣೆಗೆ ಪಟ್ಟು ಹಿಡಿದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಭಟನೆ

ರೈತರಿಗೆ ದೌರ್ಜನ್ಯ ಆರೋಪ
Published 5 ಜೂನ್ 2023, 15:44 IST
Last Updated 5 ಜೂನ್ 2023, 15:44 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಜೋಡುಗಟ್ಟೆಯ ದನಗಳ ಸಂತ್ರೆಯಲ್ಲಿ ರೈತರು ಖರೀದಿ ಮಾಡಿ ತಮ್ಮ ಗ್ರಾಮಗಳಿಗೆ ಹಸುಗಳನ್ನು ಕ್ಯಾಂಟರ್‌ನಲ್ಲಿ ತುಂಬಿ ತೆರಳುತ್ತಿದ್ದಾಗ ವಶಕ್ಕೆ ಪಡೆದು ರೈತರಿಗೆ ದೌರ್ಜನ್ಯ ನಡೆಸಿದ ಪಟ್ಟಣದ ಪಿಎಸ್‍ಐನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಇಲ್ಲಿನ ಪೊಲೀಸ್‍ ಠಾಣೆ ಎದುರು ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಸೋಮವಾರ ಪ್ರತಿಭಟನೆ ನಡೆಸಿದರು.

ಜೋಡುಗಟ್ಟೆಯಲ್ಲಿ ಪ್ರತಿ ಭಾನುವಾರ ರಾಸುಗಳ ಸಂತೆ ನಡೆಯುತ್ತದೆ. ಭಾನುವಾರ  ಸಂತೆಗೆ ಹಾವೇರಿಯಿಂದ ಕೆಲ ರೈತರು ರಾಸುಗಳನ್ನು ಖರೀದಿ ಮಾಡಿದ್ದಾರೆ. ನಂತರ ತಮ್ಮ ಊರುಗಳಿಗೆ ರಾಸುಗಳನ್ನು ರವಾನಿಸಲು ಕ್ಯಾಂಟರ್ ವಾಹನವನ್ನು ಬಾಡಿಗೆಗೆ ಎಂದು ಪಡೆದು ಆ ವಾಹನದಲ್ಲಿ 10 ರಿಂದ 15 ರಾಸುಗಳನ್ನು ತುಂಬಿ ತೆರಳುತ್ತಿದ್ದಾಗ ಮಾಯಸಂದ್ರ ಸಮೀಪದಲ್ಲಿ 10 ರಿಂದ 12 ಜನ ಬಜರಂಗದಳದ ಯುವಕರು ಎಂದು ಹೇಳಿ ರಾಸುಗಳನ್ನು ತುಂಬಿದ ವಾಹನವನ್ನು ತಡೆದಿದ್ದಾರೆ. ಈ ವಾಹನದಲ್ಲಿರುವ ರಾಸುಗಳನ್ನೆಲ್ಲ ಕಸಯಿಖಾನೆಗೆ ಸೇರಿಸುತ್ತಿದ್ದೀರಾ ಎಂಬ ಆರೋಪ ಮಾಡಿ ಪೊಲೀಸರಿಗೆ ಕರೆ ಮಾಡಿ ತಿಳಿಸಿ ನಂತರ ರಾಸು ತುಂಬಿದ ವಾಹನವನ್ನು ತುರುವೇಕೆರೆ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ತಂದು ರೈತರ ಮೇಲೆ ದೂರು ನೀಡಿದ್ದಾರೆ.

ಈ ವೇಳೆ ರೈತರು ನಾವು ರೈತರು ಎಂದು ಹೇಳಿಕೊಂಡರೂ ಪೊಲೀಸರಾಗಲಿ, ಬಜರಂಗದಳದವರಾಗಲಿ ರೈತರ ಮಾತಿಗೆ ಕಿವಿ ಕೊಡದೆ ನಮ್ಮ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ರೈತರು ಆರೋಪಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಪಿಎಸ್‍ಐ ಅಧಿಕಾರಿಗಳ ದುಂಡಾ ವರ್ತನೆ ಖಂಡಿಸಿ ರೈತರ ಮೇಲೆ ಯಾವುದೇ ಕಾನೂನಾತ್ಮಕವಾಗಿ ಪರಿಶೀಲಿಸದೆ ಬಜರಂಗದಳದವರು ಮಾತೇ ಮುಖ್ಯವಾಗಿದೆಂದು ಪೊಲೀಸ್ ಅಧಿಕಾರಿಗಳ ದುರಾಡಳಿತವನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು. ನಂತರ ಎಸ್‌ಪಿ, ಡಿವೈಎಸ್‍ಪಿ ಅವರಿಗೆ ಕರೆ ಮಾಡಿ ನಡೆದಿರುವ ವಿಷಯವನ್ನು ತಿಳಿಸಿ ಈ ಕೂಡಲೇ ನಮ್ಮ ರೈತರನ್ನು ಮತ್ತು ರಾಸುಗಳನ್ನು ಬಿಡಬೇಕು. ರೈತ ವಿರೋಧಿ ಪೊಲೀಸ್‍ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ನಂತರ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ರೈತರು ಮತ್ತು ರಾಸುಗಳನ್ನು ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT