ಅಂತರ ರಾಜ್ಯ ಮೊಬೈಲ್ ಕಳ್ಳನ ಬಂಧನ

7

ಅಂತರ ರಾಜ್ಯ ಮೊಬೈಲ್ ಕಳ್ಳನ ಬಂಧನ

Published:
Updated:
Deccan Herald

ಪಾವಗಡ: ಪಟ್ಟಣದ ನಾಗರಕಟ್ಟೆ ಮುಂದಿನ ಮಂಜು ಮೊಬೈಲ್ಸ್ ಅಂಗಡಿಯ ಬೀಗ ಮುರಿದು ಮೊಬೈಲ್‌ ಕಳವು ಮಾಡಿದ್ದ ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆಂಧ್ರದ ಕಲ್ಯಾಣದುರ್ಗ ಮೇಲುಕುಂಟೆ ಗ್ರಾಮದ ಮಲ್ಲೇಶ (49) ಬಂಧಿತ. ಮೇ 5, 2018ರಂದು ಮಂಜು ಮೊಬೈಲ್ಸ್ ಅಂಗಡಿ ಷಟರ್ ಬೀಗ ಮುರಿದು ₹ 1.93 ಲಕ್ಷ ಮೌಲ್ಯದ 49 ಮೊಬೈಲ್ ಕಳವು ಮಾಡಲಾಗಿತ್ತು. ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯಿಂದ ₹ 55 ಸಾವಿರ ಮೌಲ್ಯದ 10 ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಆರೋಪಿ ಅಂತರರಾಜ್ಯ ಕಳ್ಳನಾಗಿದ್ದು, ಈತನ ಮೇಲೆ ಆಂಧ್ರದ ಕಂಬದೂರು, ಬೆಂಗಳೂರಿನ ರಾಜನಕುಂಟೆ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿವೈಎಸ್‌ಪಿ ಕಲ್ಲೇಶಪ್ಪ, ಪ್ರಭಾರಿ ಸಿಪಿಐ ಜಿ.ಡಿ. ಶ್ರೀಶೈಲಮೂರ್ತಿ, ಸಬ್ಇನ್‌ಸ್ಪೆಕ್ಟರ್ ಮಧುಸೂದನ್, ಸಿಬ್ಬಂದಿ ಸೋಮಶೇಖರ್, ಶ್ರೀನಿವಾಸ್, ಮಂಜುನಾಥ್, ಗಂಗಾಧರ್, ಭರತ್ ತನಿಖಾ ತಂಡದಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !