ಕ್ರೇನ್ ಗೆ ಒಮಿನಿ ವ್ಯಾನ್ ಡಿಕ್ಕಿ, ನಾಲ್ವರ ಸಾವು

ಶಿರಾ: ತುಮಕೂರು- ಶಿರಾ ನಡುವಿನ 48ರ ರಾಷ್ಟ್ರೀಯ ಹೆದ್ದಾರಿಯ ತರೂರು ಗೇಟ್ ಬಳಿ ಕ್ರೇನ್ ಗೆ ಒಮಿನಿ ವ್ಯಾನ್ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರ ಗುರುತು ಪತ್ತೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರದ ಕಿತ್ತನಹಳ್ಳಿಯ ಪ್ರಜ್ವಲ್, ಅನಿಲ್ ಕುಮಾರ್, ಮಲ್ಲಸಂದ್ರದ ಅಶೋಕ್ ಎಂಬುವರು ಗಾಯಗೊಂಡಿದ್ದಾರೆ. ಮೃತರು ಒಮಿನಿ ವ್ಯಾನಿನಲ್ಲಿ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದರೆನ್ನಲಾಗಿದೆ.
ತರೂರು ಗೇಟ್ ಬಳಿ ಕೆಟ್ಟು ನಿಂತಿದ್ದ ಲಾರಿಯನ್ನು ಬೆಳಿಗ್ಗೆ 3 ಗಂಟೆ ವೇಳೆ ತೆರವುಗೊಳಿಸಲು ನಿಂತಿದ್ದ ಕ್ರೇನ್ ಗೆ ಅತಿ ವೇಗದಲ್ಲಿ ಬಂದ ಒಮಿನಿ ವ್ಯಾನ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಕಳ್ಳಂಬೆಳ್ಳ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.