ತುಮಕೂರು: ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದ್ದು, ಸೊಪ್ಪಿಗೆ ಶುಕ್ರದೆಸೆ ಆರಂಭವಾಗಿದೆ. ದಾಳಿಂಬೆ ಹಣ್ಣು ದುಬಾರಿಯಾಗಿದ್ದರೆ, ಇತರೆ ಹಣ್ಣುಗಳ ದರ ಕಡಿಮೆಯಾಗಿದೆ. ಬೇಳೆ, ಧಾನ್ಯ ಕೊಂಚ ತಗ್ಗಿದ್ದು, ಮೀನು, ಕೋಳಿ ಮಾಂಸ ಅಗ್ಗವಾಗಿದೆ.
ಬೀನ್ಸ್ ಏರಿಕೆ: ಕುಸಿತ ಕಂಡಿದ್ದ ಬೀನ್ಸ್ ದರ ಈ ವಾರ ಅಲ್ಪ ಚೇತರಿಸಿಕೊಂಡಿದೆ. ಈರುಳ್ಳಿ ಮತ್ತೆ ಏರಿಕೆಯತ್ತ ಮುಖ ಮಾಡಿದ್ದು, ಕಳೆದ ಕೆಲ ವಾರಗಳಿಂದ ದುಬಾರಿಯಾಗುತ್ತಲೇ ಸಾಗಿದೆ. ಹೊಸ ಮಾಲು ಬರುವವರೆಗೂ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತದೆ. ಟೊಮೆಟೊ ಬೆಲೆಯೂ ಅಲ್ಪ ಮಟ್ಟಿಗೆ ಸುಧಾರಿಸಿದೆ.
ಬೆಂಡೆಕಾಯಿ, ಮೂಲಂಗಿ ತುಸು ಹೆಚ್ಚಳವಾಗಿದ್ದರೆ, ಬೀಟ್ರೂಟ್, ಬದನೆಕಾಯಿ, ಎಲೆಕೋಸು, ತೊಂಡೆಕಾಯಿ, ಹಾಗಲಕಾಯಿ, ನುಗ್ಗೇಕಾಯಿ ಅಗ್ಗವಾಗಿದೆ. ಇಳಿಕೆ ಕಂಡಿದ್ದ ಶುಂಠಿ ಅಲ್ಪಮಟ್ಟಿಗೆ ಏರಿಕೆ ದಾಖಲಿಸಿದೆ.
ಸೊಪ್ಪು ದುಬಾರಿ: ಕಳೆದ ಮೂರು ವಾರಗಳಿಂದ ಸೊಪ್ಪು ಏರಿಕೆಯತ್ತ ಮುಖಮಾಡಿದ್ದು, ಈಗ ಮತ್ತಷ್ಟು ದುಬಾರಿಯಾಗಿದೆ. ಪಾಲಕ್ ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದೆ. ಮಳೆಯಿಂದಾಗಿ ಸೊಪ್ಪು ಹಾಳಾಗಿದ್ದು, ಆವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹80ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ದಾಳಿಂಬೆ ಗಗನಮುಖಿ: ವರಮಹಾಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ಹಣ್ಣುಗಳ ಧಾರಣೆ ಇಳಿಕೆಯತ್ತ ಸಾಗಿದ್ದರೆ, ದಾಳಿಂಬೆ ಹಣ್ಣು ಗಗನಮುಖಿಯಾಗಿದ್ದು, ಕೆ.ಜಿ ₹300 ದಾಟಿದೆ. ದುಬಾರಿಯಾಗಿದ್ದ ಪಪ್ಪಾಯ ದರ ಇಳಿಕೆ ಕಂಡಿದೆ. ಸೇಬು, ಮೂಸಂಬಿ, ಏಲಕ್ಕಿ ಬಾಳೆಹಣ್ಣು, ಪೈನಾಪಲ್, ಕರಬೂಜ, ಕಲ್ಲಂಗಡಿ, ದ್ರಾಕ್ಷಿ ಅಲ್ಪ ಅಗ್ಗವಾಗಿದೆ.
ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ದರ ಕೊಂಚ ಇಳಿಕೆಯಾಗಿದ್ದರೆ, ಪಾಮಾಯಿಲ್ ಅಲ್ಪ ಏರಿಕೆಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹90–92, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬಟಾಣಿ ಮತ್ತೆ ಹೆಚ್ಚಳ: ಬಟಾಣಿ ಧಾರಣೆ ಏರಿಕೆಯನ್ನು ಮುಂದುವರಿಸಿದ್ದು, ತೊಗರಿ ಬೇಳೆಗಿಂತ ತುಸು ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ. ಹುರಿಗಡಲೆ ಸಹ ಇದೇ ದಾರಿಯಲ್ಲಿ ಸಾಗಿದೆ. ಕಡಲೆ ಬೇಳೆ ಕೆ.ಜಿಗೆ ₹20ರ ವರೆಗೂ ಏರಿಕೆಯಾಗಿದೆ. ಹೆಸರು ಕಾಳು ಹೊಸ ಬೆಳೆ ಬಂದಿದ್ದು, ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿದ್ದು, ಬೆಲೆ ಇಳಿಕೆಯತ್ತ ಸಾಗಿದೆ. ಉಳಿದಂತೆ ಧಾನ್ಯಗಳ ದರ ಅಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಮಸಾಲೆ ಪದಾರ್ಥ: ಧನ್ಯ, ಬ್ಯಾಡಗಿ ಮೆಣಸಿನಕಾಯಿ ತುಸು ಏರಿಕೆಯಾಗಿದ್ದು, ಮೆಣಸು, ಜೀರಿಗೆ, ಲವಂಗ ಅಲ್ಪ ಅಗ್ಗವಾಗಿದೆ. ಬೆಲ್ಲ ಕೆ.ಜಿಗೆ ₹5 ಹೆಚ್ಚಳವಾಗಿದೆ.
ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹180–190, ಹುಣಸೆಹಣ್ಣು ₹100–160, ಬೆಲ್ಲ ಕೆ.ಜಿ ₹55–60, ಕಾಳುಮೆಣಸು ಕೆ.ಜಿ ₹700–750, ಜೀರಿಗೆ ಕೆ.ಜಿ ₹320–330, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹850–900, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,250, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹620–640, ಗೋಡಂಬಿ ಕೆ.ಜಿ ₹800–850, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಇಳಿಕೆ: ಈ ವಾರ ಕೋಳಿ ಮಾಂಸದ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್‌ಲೆಸ್ ಕೆ.ಜಿ ₹180, ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಸಿಗುತ್ತಿದೆ.
ಮೀನು ಇಳಿಕೆ: ಮೀನಿನ ಧಾರಣೆ ನಿಧಾನವಾಗಿ ಇಳಿಕೆಯತ್ತ ಸಾಗಿದ್ದು, ಆವಕ ಹೆಚ್ಚಾದರೆ ಮತ್ತಷ್ಟು ಕಡಿಮೆಯಾಗಬಹುದು. ಬಂಗುಡೆ ಕೆ.ಜಿ ₹270, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹840, ಬಿಳಿಮಾಂಜಿ ಕೆ.ಜಿ ₹990, ಕಪ್ಪುಮಾಂಜಿ ಕೆ.ಜಿ ₹980, ಇಂಡಿಯನ್ ಸಾಲ್ಮನ್ ಕೆ.ಜಿ ₹930, ಸೀಗಡಿ ಕೆ.ಜಿ ₹430–610, ಏಡಿ ಕೆ.ಜಿ 500ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ದರ ಪಟ್ಟಿ.....
ಹಣ್ಣು (ಬೆಲೆ ಕೆ.ಜಿ ₹)
ಸೇಬು;200
ದಾಳಿಂಬೆ;300
ಮೂಸಂಬಿ;70
ಕಿತ್ತಳೆ;150
ಸಪೋಟ;80
ಏಲಕ್ಕಿ ಬಾಳೆ;115–120
ಪಚ್ಚಬಾಳೆ;40
ಸೀಬೆ;150
ಪೈನಾಪಲ್;50
ಪಪ್ಪಾಯ;30
ಕರಬೂಜ;50
ಕಲ್ಲಂಗಡಿ;25
ದ್ರಾಕ್ಷಿ;150
******
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;160–170
ಕಡಲೆ ಬೇಳೆ;98–105
ಉದ್ದಿನ ಬೇಳೆ;130–140
ಹೆಸರು ಬೇಳೆ;110–115
ಕಡಲೆಕಾಳು;88–92
ಹೆಸರು ಕಾಳು;100–110
ಅಲಸಂದೆ;95–100
ಅವರೆಕಾಳು;140–150
ಹುರುಳಿಕಾಳು;76–80
ಹುರಿಗಡಲೆ;110–115
ಬಟಾಣಿ;160–170
ಕಡಲೆ ಬೀಜ;120–125
ಗೋಧಿ;40–45
ಸಕ್ಕರೆ;41–42
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;30–40
ಕ್ಯಾರೇಟ್;40–50
ಬೀಟ್ರೂಟ್;20–30
ಈರುಳ್ಳಿ;45–50
ಬೆಳ್ಳುಳ್ಳಿ;200–220
ಟೊಮೆಟೊ;15–20
ಆಲೂಗೆಡ್ಡೆ;35–40
ಗೆಡ್ಡೆಕೋಸು;40–50
ಮೂಲಂಗಿ;15–20
ಬೆಂಡೆಕಾಯಿ;20–25
ಬದನೆಕಾಯಿ;20–25
ಎಲೆಕೋಸು;10–15
ಹೂಕೋಸು(1ಕ್ಕೆ);30
ತೊಂಡೆಕಾಯಿ;15–20
ಹಾಗಲಕಾಯಿ;30–40
ನುಗ್ಗೆಕಾಯಿ;40–50
ಮೆಣಸಿನಕಾಯಿ;50–60
ಕ್ಯಾಪ್ಸಿಕಂ;50–60
ಶುಂಠಿ;80–100
ಸೌತೆಕಾಯಿ 1ಕ್ಕೆ;4–5
ನಿಂಬೆಹಣ್ಣು 1ಕ್ಕೆ;3–4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.