ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್‌ ತಡೆಗೆ ಜಾಗ್ರತೆ ಅಗತ್ಯ

ಉಚಿತ ಜಾನುವಾರು ಆರೋಗ್ಯ ತಪಾಸಣಾ ಶಿಬಿರ
Last Updated 18 ಜನವರಿ 2023, 5:10 IST
ಅಕ್ಷರ ಗಾತ್ರ

ತಿಪಟೂರು: ‘ಹೈನುಗಾರಿಕೆಯಲ್ಲಿ ತೊಡಗಿರುವ ಪಶು ಪಾಲಕರು ಜಾನುವಾರುಗಳನ್ನು ಪ್ರೀತಿಯಿಂದ ಪಾಲನೆ ಮಾಡಿದರೆ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಎಂದು ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದೀಶ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಮಂಗಳವಾರ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಿಂದ ನಡೆದ ಉಚಿತ ಜಾನುವಾರು ಆರೋಗ್ಯ ತಪಾಸಣಾ ಶಿಬಿರ, ಜಂತುನಾಶಕ ವಿತರಣೆ ಹಾಗೂ ರೇಬಿಸ್‌ ರೋಗದ ವಿರುದ್ಧ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ಜಾನುವಾರುಗಳು ಮನುಷ್ಯನಂತೆ ಎಲ್ಲಾ ಕ್ರಿಯೆಗಳಲ್ಲಿ ಭಾಗಿಯಾಗಿದ್ದು ಮಾನವನಿಗೆ ಹಾಲು, ಸಗಣಿ ನೀಡುತ್ತವೆ. ಇದರಿಂದ ಪಶುಪಾಲಕರ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಆದ್ದರಿಂದ ಅವುಗಳಿಗೆ ಕಾಲಕ್ಕೆ ತಕ್ಕಂತೆ ಸರಿಯಾದ ಚಿಕಿತ್ಸೆ ನೀಡುವ ಕೆಲಸವನ್ನು ಇಲಾಖೆ ಮಾಡುತ್ತಾ ಬರುತ್ತಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು
ಹೇಳಿದರು.

ಪಶು ವೈದ್ಯಾಧಿಕಾರಿ ಭಾನುಪ್ರಕಾಶ್ ಮಾತನಾಡಿ, ಜಾನುವಾರುಗಳು ಬಯಲು ಪ್ರದೇಶದಲ್ಲಿ ಆಹಾರ ಸೇವಿಸುವಾಗ ಹಲವಾರು ಕಾಯಿಲೆಗಳು ಹರಡುತ್ತವೆ. ಅಂತಹ ರೋಗಗಳಲ್ಲಿ ರೇಬಿಸ್ ರೋಗ ನಾಯಿ ಮೂಲಕ ಬರುತ್ತದೆ. ನಾಯಿ ಪ್ರಭೇದಗಳಾದ ತೋಳ, ನರಿಯಂತಹ ಪ್ರಾಣಿಗಳಿಂದ ರಾಸುಗಳ ರಕ್ಷಣೆ ಬಹಳ ಮುಖ್ಯವಾಗಿದೆ ಎಂದರು.

ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ಜಾನುವಾರುಗಳಿಗೆ ನೀಡಿದಾಗ ಗುಣಮಟ್ಟದ ಹಾಲು ಉತ್ಪಾದನೆ ಮಾಡಬಹುದು. ಆದ್ದರಿಂದ ರೈತರು ಇಲಾಖೆಯಿಂದ ಸಿಗುವ ಸವಲತ್ತು ಬಳಸಿಕೊಂಡು ಹೈನುಗಾರಿಕೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ಡಾ.ಮಿಥುನ್, ಪರೀಶ್ ಪಾಷ, ಕುಮಾರ್, ಸಂಘದ ಮಾಜಿ ಅಧ್ಯಕ್ಷ ದಿನೇಶ್, ಮಂಜುನಾಥ್, ಪ್ರಶಾಂತ್, ಉಪಾಧ್ಯಕ್ಷ ಶಿವನಂದಸ್ವಾಮಿ, ನಿರ್ದೇಶಕರಾದ ರಾಜಶೇಖರ್, ಉಷಾ ಮಂಜುನಾಥ್, ಗ್ರಾ.ಪಂ. ಮಾಜಿ ಸದಸ್ಯ ರಾಜಶೇಖರ್, ಪರಮೇಶ್, ಬಿದರೆಗುಡಿ ಪಶು ಪರಿವೀಕ್ಷಕರಾದ ತ್ರಿಮೂರ್ತಿ, ದಾದಾಪೀರ್, ಸುಧೀರ್, ಸಿಇಒ ಸಿದ್ದರಾಮಯ್ಯ, ಸಹಾಯಕ ರವಿ, ಗ್ರಾಮಸ್ಥರಾದ ಹರೀಶ್, ಪ್ರದೀಪ್, ದರ್ಶನ್, ಪವನ್, ಯಶೋದಮ್ಮ, ನೀಲಕಂಠಸ್ವಾಮಿ, ಚಿಕ್ಕಣ್ಣ, ಸುಧಾಕರ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT