ಶನಿವಾರ, ಅಕ್ಟೋಬರ್ 31, 2020
27 °C

ಲಾಕ್‌ಡೌನ್‌ನಲ್ಲಿ ಅರ್ಚಕರ ಕಡೆಗಣನೆ: ಅರ್ಚಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಮುಜರಾಯಿ ಇಲಾಖೆಯ ‘ಸಿ’ ವರ್ಗದ ದೇವಸ್ಥಾನದ ಅರ್ಚಕರಿಗೆ ತಸ್ತಿಕ್ ಆದಾಯ ಬಿಟ್ಟರೆ ಬೇರೆ ಆದಾಯ ಇಲ್ಲದಿರುವುದರಿಂದ ಜೀವನ ನಡೆಸುವುದು ಕಷ್ಟಕರ ಎಂದು ಅರ್ಚಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ ಹೇಳಿದರು.

ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅರ್ಚಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾ, ಲಾಕ್‌ಡೌನ್‌ನಲ್ಲಿ ಸರ್ಕಾರವು ಅರ್ಚಕರನ್ನು ಸಂಪೂರ್ಣವಾಗಿ ಕಡೆಗಣಿಸಿತು. ಸಿ ವರ್ಗದ ದೇವಾಲಯಗಳಿಗೆ ಹಾಗೂ ಅರ್ಚಕರಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕಾಗಿಲ್ಲ. ‘ಎ’ ವರ್ಗದ ದೇವಾಲಯಗಳ ಆದಾಯವನ್ನು ‘ಸಿ’ ವರ್ಗದ ದೇವಾಲಯದ ಅರ್ಚಕರಿಗೆ ನೀಡಿದರೆ ಸಾಕು ಎಂದರು. ‌‌

ಶಾಸಕ ಎಸ್ಆರ್ ಶ್ರೀನಿವಾಸ್ ಮಾತನಾಡಿ, ‘ಅರ್ಚಕರು ತೃಪ್ತರಾದರೆ ಇಡೀ ಸಮಾಜವೇ ಸಂತೃಪ್ತವಾಗಿರುತ್ತದೆ. ತಸ್ತಿಕ್ ಹಣ ವಿತರಣೆ ವಿಚಾರದಲ್ಲಿ ಕೆಲವು ಅಧಿಕಾರಿಗಳು ಅರ್ಚಕರಿಗೆ ವಂಚಿಸುತ್ತಿದ್ದಾರೆ. ಯಾವುದೇ ತಸ್ತಿಕ್ ಹಣ ಬಾಕಿ ಇದ್ದರೆ ತಕ್ಷಣ ಬಿಡುಗಡೆ ಮಾಡಿಸುತ್ತೇನೆ’ ಎಂದು ಹೇಳಿದರು. ‌

ತೇವಡಿಹಳ್ಳಿಯ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ‘ಅರ್ಚಕರು ಬೇರೆ ಬೇರೆ ಜಾತಿಯವರಾದರೂ ಎಲ್ಲರೂ ದೇವರ ಪೂಜೆ ಮಾಡುವವರಾಗಿದ್ದಾರೆ. ಇಡೀ ಅರ್ಚಕ ಸಮುದಾಯ ಒಂದಾಗಬೇಕಾದ ಅಗತ್ತ ಇದೆ. ಎಲ್ಲರೂ ಸಂಕಲ್ಪ ಮಾಡಿದರೆ ನಾವು ಕರೋನ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಅರ್ಚಕ ಸಂಘದ ಅಧ್ಯಕ್ಷ ರಾಮ ತೀರ್ಥನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಎಪಿಎಂಸಿ ನಿರ್ದೇಶಕ ಲೋಕೇಶ್ ಹಾಗೂ ತಾಲ್ಲೂಕು ಅರ್ಚಕ ಸಂಘದ ಅಧ್ಯಕ್ಷ ರಂಗನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು