ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಕ್ರಿಸ್‌ಮಸ್ ಸಂಭ್ರಮ

Last Updated 25 ಡಿಸೆಂಬರ್ 2021, 5:35 IST
ಅಕ್ಷರ ಗಾತ್ರ

ತುಮಕೂರು: ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಜಿಲ್ಲೆಯ ಚರ್ಚ್‌ಗಳು ಹಾಗೂ ಕ್ರೈಸ್ತರ ಮನೆಗಳು ವಿವಿಧ ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಬ್ಬದ ದಿನವಾದ ಶನಿವಾರ ಬೆಳಿಗ್ಗೆ 8.30ಕ್ಕೆ ನಗರದ ಪ್ರಮುಖ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ನಡೆಯುವ ಪ್ರಾರ್ಥನೆಯಲ್ಲಿ ಕ್ರೈಸ್ತ ಸಮುದಾಯದವರು ಪಾಲ್ಗೊಂಡು ಏಸುಕ್ರಿಸ್ತನ ಪ್ರಾರ್ಥನೆಯಲ್ಲಿ ನಿರತರಾಗುತ್ತಾರೆ. ಪವಿತ್ರಗ್ರಂಥ ಬೈಬಲ್‌ ಓದುವ ಮೂಲಕ ಏಸುಕ್ರಿಸ್ತನನೆನೆಯುವ ಕೆಲಸ ಮಾಡುತ್ತಾರೆ.

ಪ್ರಾರ್ಥನೆಯ ಮೂಲಕ ಹಬ್ಬದ ಸಂದೇಶವನ್ನು ರವಾನಿಸಲಾಗುತ್ತದೆ. ಹಬ್ಬದ ಉದ್ದೇಶದ ಬಗ್ಗೆ ಸಮುದಾಯದವರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತದೆ. ಹಬ್ಬದ ಮೌಲ್ಯ, ಆಚಾರ– ವಿಚಾರ, ಇಷ್ಟು ವರ್ಷಗಳ ಕಾಲ ಹಬ್ಬ ನಡೆದು ಬಂದ ಹಾದಿಯನ್ನು ಒಮ್ಮೆ ಮೆಲುಕು ಹಾಕಲಾಗುತ್ತದೆ. ಎಲ್ಲರೂ ಒಂದೇ ಸಾರಿ ಹಾಡುಗಳನ್ನು ಹಾಡುವ ಮೂಲಕ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜಗ‌ತ್ತಿಗೆ ಏಸುಕ್ರಿಸ್ತ ನೀಡಿದ ಸಂದೇಶವನ್ನು ಸಾರುವ ಕೆಲಸ ಮಾಡಲಾಗುತ್ತದೆ.

ಸಂಜೆ ಚರ್ಚ್‌ನ ಪ್ರಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ಹಬ್ಬದ ವಿಶೇಷ ಅತಿಥಿಗಳಾಗಿ ಆಗಮಿಸುವ ಸಂಬಂಧಿಕರು, ಸ್ನೇಹಿತರಿಗೆ ಮನೆಯಲ್ಲಿ ವಿಶೇಷ ಭೋಜನಾ ವ್ಯವಸ್ಥೆ ಮಾಡಲಾಗುತ್ತದೆ. ಒಬ್ಬರಿಗೊಬ್ಬರು ಪರಸ್ಪರವಾಗಿ ಉಡುಗೊರೆ ಹಾಗೂ ಕ್ರಿಸ್‌ಮಸ್‌ ಕೇಕ್‌ ವಿತರಣೆ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT