ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಷ್ಟಿ ಚಿಂತನೆಯಿಂದ ದೇಶ ರಕ್ಷಣೆ’; ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

Last Updated 16 ಆಗಸ್ಟ್ 2021, 1:23 IST
ಅಕ್ಷರ ಗಾತ್ರ

ತುಮಕೂರು: ವ್ಯಕ್ತಿ ಚಿಂತನೆ ಬದಲುಸಮಷ್ಟಿ ಚಿಂತನೆ ಇದ್ದಾಗ ಮಾತ್ರ ಭಾರತ ರಕ್ಷಣೆ ಸಾಧ್ಯ ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ಎಸ್.ರೇಣುಕಾರಾಧ್ಯರ ಅವರ ‘ವಂದೇ ಭಾರತಂ’ ಕೃತಿಯನ್ನುಭಾನುವಾರ ಬಿಡುಗಡೆ ಮಾಡಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ನಾವು ವ್ಯಕ್ತಿ ಚಿಂತನೆಯನ್ನು ಪಕ್ಕಕ್ಕೆ ಸರಿಸಿ ಸಮಷ್ಟಿಯನ್ನು ಗಟ್ಟಿಯಾಗಿ ಹಿಡಿದರೆ ಭಾರತವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಸಲಹೆ ಮಾಡಿದರು.

ಅಖಂಡ ಭಾರತ ಕಲ್ಪನೆಯನ್ನು ಮಕ್ಕಳು,ಯುವಕರಲ್ಲಿ ಬಿತ್ತಬೇಕು ಎನ್ನುವುದು ರೇಣುಕಾರಾಧ್ಯರ ಮೂಲ ಉದ್ದೇಶವಾಗಿದೆ. ಅವರ ಈ ಕಲ್ಪನೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತುಂಬಾ ಅನ್ವಯವಾಗುತ್ತದೆ. ರಾಷ್ಟ್ರದ ಅಖಂಡ ಭಾರತದಸಮಷ್ಟಿ ಚಿಂತನೆ ಕಡೆ ಹೋಗಬೇಕೆನ್ನುವುದೇ ಕೃತಿಯ ಆಶಯವಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರದ ಬಗೆಗಿನ ಚಿಂತನೆ ಬಹಳ ಕಡಿಮೆಯಾಗಿದೆ. ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮೂಲಕ ರಾಷ್ಟ್ರದ ಬಗ್ಗೆ ಜಾಗೃತಿ ಮಾಡಿಸಲಾಗುತಿತ್ತು. ಈಗ ಅವುಗಳು ನೆಪಮಾತ್ರಕ್ಕೆ ಉಳಿದುಕೊಂಡಿವೆ ಎಂದು ವಿಷಾದಿಸಿದರು.

ವಿಜ್ಞಾನ, ಕಲೆ, ಅಧ್ಯಾತ್ಮವನ್ನು ಪ್ರತಿಯೊಬ್ಬ ಲೇಖಕರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಕೃತಿಗಳು ಮೂಡಿಬರಲು ಸಾಧ್ಯವಾಗುತ್ತದೆ ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕಗಳ ಓದಿನ ಬಗ್ಗೆ ಹೆಚ್ಚು ಆಸಕ್ತಿ ಬರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ ಬೆಳೆಸಬೇಕು. ಉತ್ತಮ ಆದರ್ಶಗಳನ್ನು ತುಂಬುವ ಕೆಲಸ ಮಾಡಬೇಕು’ ಎಂದು ಸಲಹೆ ಮಾಡಿದರು.

75 ಲೇಖನಗಳು ಇರುವ ಕೃತಿಯನ್ನು ಎಸ್.ರೇಣುಕಾರಾಧ್ಯ ಅವರು ಹೊರತಂದು ಡಾ.ಶಿವಕುಮಾರ ಸ್ವಾಮೀ
ಜಿಗೆ ಅರ್ಪಿಸಿರುವುದನ್ನು ಶ್ಲಾಘಿಸಿದರು.

ಕೃತಿ ಲೇಖಕ ಎಸ್.ರೇಣುಕಾರಾಧ್ಯ, ‘ಕೃತಿಯನ್ನು ಬರೆಯಲು ಪ್ರೊ.ಬಿ.ಗಂಗಾಧರಯ್ಯ, ಶಿವಗಂಗಯ್ಯ ಅವರ ಪ್ರೋತ್ಸಾಹವೇ ಕಾರಣ. ಶಿವಕುಮಾರ ಸ್ವಾಮೀಜಿ ಅವರನ್ನು 1965ರಿಂದ 67ರವರೆಗೆ ಎರಡು ವರ್ಷಗಳ ಕಾಲ ಮಠದಲ್ಲಿ ಹತ್ತಿರದಿಂದ ಬಲ್ಲೆ. ಮಠ ಕಟ್ಟಲು ಎಷ್ಟು ಕಷ್ಟಪಟ್ಟರು ಎಂಬುದು ನನಗೆ ಗೊತ್ತು. ಆ ಸಂದರ್ಭದ ಸಂಪೂರ್ಣ ಚಿತ್ರಣವನ್ನು ಕೃತಿಯಲ್ಲಿ ರಚಿಸಿದ್ದೇನೆ’ ಎಂದು ನೆನಪು ಮಾಡಿಕೊಂಡರು.

ಕೃತಿ ಕುರಿತು ತುಮಕೂರು ವಿಶ್ವವಿದ್ಯಾನಿಲಯದ ಪ್ರೊ.ಡಿ.ವಿ.ಪರಮಶಿವಮೂರ್ತಿ, ಸಿದ್ಧಗಂಗಾ ಆಸ್ಪತ್ರೆ ಡಾ.ಶಾಲಿನಿ ಮಾತನಾಡಿದರು. ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ, ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ, ಡಾ.ಎಸ್.ಪರಮೇಶ್, ಡಾ.ಉಮಾಶಂಕರ್, ಎಂ.ವಿ.ನಾಗಣ್ಣ, ಎನ್.ಹನುಮಂತರಾಜು, ನಟರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT