ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಪಡಿತರ ಸಾಗಿಸಲು ಪರದಾಟ

Last Updated 3 ಏಪ್ರಿಲ್ 2020, 10:29 IST
ಅಕ್ಷರ ಗಾತ್ರ

ತುಮಕೂರು: ಲಾಕ್‌ಡೌನ್‌ನಿಂದ ಬಡ ಜನರಿಗೆ ತೊಂದರೆ ಆಗಬಾರದೆಂದುಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸುತ್ತಿದೆ. ಆ ಪಡಿತರವನ್ನು ಅಂಗಡಿಯಿಂದ ಪಡೆದ ಜನರು, ಮನೆಯವರೆಗೂ ಸಾಗಿಸಲು ಶ್ರಮ ಪಡಬೇಕಾಯಿತು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮೂರ್ನಾಲ್ಕು ಸಣ್ಣ ಹಳ್ಳಿಗಳಿಗೆ ಒಂದು ಪಡಿತರ ಅಂಗಡಿ ಇದೆ. ಒಂದು ಊರಿನ ಜನರು ಮತ್ತೊಂದು ಊರಿಗೆ ಹೋಗಿ ಪಡಿತರ ಪಡೆಯಬೇಕಾದ ಸ್ಥಿತಿ ಇದೆ. ವಾಹನ ವ್ಯವಸ್ಥೆ ಇಲ್ಲದ ಕಾರಣ ಪಡಿತರವನ್ನು ಮನೆಗೆ ಸಾಗಿಸಲು ಬಹುತೇಕರು ಹರಸಾಹಸ ಪಡಬೇಕಾಯಿತು. ಕೆಲವರು ಬೈಕ್‌, ಮೊಪೆಡ್‌ಗಳ ಮೊರೆ ಹೋದರು.

ಪಡಿತರ ಪಡೆಯಲು ಬಹುತೇಕ ಅಂಗಡಿಗಳ ಮುಂದೆ ಜನರು ಗುಂಪುಗೂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಅಂಗಡಿ ಮುಂದೆ ಹಾಕಿದ್ದ ಚೌಕ, ವೃತ್ತದ ಗುರುತುಗಳಲ್ಲಿ ಚೀಲಗಳನ್ನು ಇಟ್ಟು, ಗುಂಪಾಗಿ ಕೂತು ಸರದಿಗಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT