ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ಶಿರಾ ಉಪ ಚುನಾವಣೆ ಫಲಿತಾಂಶ: ಬಿಜೆಪಿಯ ರಾಜೇಶ್‌ಗೌಡಗೆ ಗೆಲುವು
LIVE

ಮಾಜಿ ಸಚಿವ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಟಕವಾಗಿದೆ. ಜೆಡಿಎಸ್‌ನಿಂದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಬಿಜೆಪಿಯಿಂದ ರಾಜೇಶ್‌ಗೌಡ ಸ್ಪರ್ಧಿಸಿದ್ದರು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಎರಡು ಕೊಠಡಿಗಳಲ್ಲಿ ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
Last Updated 10 ನವೆಂಬರ್ 2020, 10:56 IST
ಅಕ್ಷರ ಗಾತ್ರ
10:5510 Nov 2020

Photos: ಶಿರಾದಲ್ಲಿ ವಿಜಯೇಂದ್ರ ವಿಜಯೋತ್ಸವ

10:0910 Nov 2020

ಕೊನೇ ಸುತ್ತಿನ ಮತ ಎಣಿಕೆ ವಿವರ

24ನೇ (ಕೊನೆ) ಸುತ್ತಿನ ಮತ ಎಣಿಕೆ ವಿವರ 

ಅಮ್ಮಾಜಮ್ಮ (ಜೆಡಿಎಸ್‌)- 35,982

ಟಿ.ಬಿ ಜಯಚಂದ್ರ (ಕಾಂಗ್ರೆಸ್‌)- 61,573

ರಾಜೇಶ್‌ಗೌಡ (ಬಿಜೆಪಿ)-74,522

ಗೆಲುವಿನ ಅಂತರ-  12,949 

(ಅಂಚೆ ಮತಪತ್ರಗಳ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ)

10:0510 Nov 2020

ಶಿರಾಕ್ಕೆ ಆಗಮಿಸಿದ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ

10:0210 Nov 2020

ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ: ರಾಜೇಶ್‌ ಗೌಡ

ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ. ಕೇಂದ್ರ ಮತ್ತು ರಾಜ್ಯಸರ್ಕಾರದ ಅಭಿವೃದ್ಧಿ ನೋಡಿ ಮತ ಹಾಕಿದ್ದಾರೆ. ಯಾರೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚಿಸಿರಲಿಲ್ಲ. ಯಡಿಯೂರಪ್ಪ ಅವರು ಮಾಡಿದರು. ಆ ಸಮಯದಾಯ ನಮ್ಮ ಕೈ ಹಿಡಿದಿದೆ. ಅವರ ಅಭಿವೃದ್ಧಿ ಗೆ ಕೆಲಸ ಮಾಡುವೆ. ಶಿರಾ ಕ್ಷೇತ್ರವನ್ನು ಶಿಕಾರಿಪುರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆ ರೀತಿಯಲ್ಲಿ ನಡೆದುಕೊಳ್ಳುವರು.

ಮೂರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ನನಗೆ ಯಾವುದೇ ಸನ್ಮಾನ ಬೇಡ. ಈ ಕ್ಷೇತ್ರದ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಗೆಲುವಿನ ಕ್ರೆಡಿಟ್ ಎಲ್ಲರಿಗೂ ಸೇರಿದೆ.

09:4710 Nov 2020

22 ಸುತ್ತಿನ ಎಣಿಕೆ ಮುಕ್ತಾಯ. ‌ಬಿಜೆಪಿ 14 ಸಾವಿರ ಲೀಡ್

09:4210 Nov 2020

ರಾಜೇಶ್‌ಗೌಡ ಮೊದಲ ಮಾತು

ನನಗೆ ಮಾರ್ಗದರ್ಶನ ನೀಡಿದ ಪಕ್ಷದ ವರಿಷ್ಠರಿಗೆ ಆಭಾರಿ. ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಯುವ ಸಮುದಾಯದ ಶ್ರಮ ನನ್ನ ಗೆಲುವಿನಲ್ಲಿ ಇದೆ.

ಎಲ್ಲ ಸಮುದಾಯದ ಜನರು ಬೆಂಬಲಿಸಿದ್ದಾರೆ.  ಮುಖ್ಯಮಂತ್ರಿ ಅವರು ಹೇಳಿದಂತೆ ಮದಲೂರು ಕೆರೆಗೆ ನೀರು ಹರಿಯಲಿದೆ.
ನೀರಾವರಿ ಮತ್ತು ಅಭಿವೃದ್ಧಿ ಗೆ ಆದ್ಯತೆ ನೀಡಲಾಗುವುದು. ನನಗೆ ದೊರೆತಿರುವ ಈ ಎರಡೂವರೆವವರ್ಷದ ಅವಧಿಯಲ್ಲಿ ಅಭಿವೃದ್ಧಿ ಗೆ ಆದ್ಯತೆ ನೀಡುವೆ.

09:3810 Nov 2020

ನೆಲ ಕಚ್ಚಿದ ಜೆಡಿಎಸ್

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ತೀವ್ರವಾಗಿ ನೆಲ ಕಚ್ಚಿದೆ ಆರಂಭದಿಂದಲೂ ಆ ಪಕ್ಷ ಗಮನಾರ್ಹವಾಗಿ ಮತಗಳನ್ನು ಪಡೆಯಲೇ ಇಲ್ಲ.

ಶಿರಾ ಜೆಡಿಎಸ್ ನ ಪ್ರಮುಖ ನೆಲೆ ಎನಿಸಿತ್ತು. ದೇವೇಗೌಡರು, ಕುಮಾರ ಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್ ಹೀಗೆ ಇಡೀ ಅವರ ಕುಟುಂಬವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿತ್ತು. ಹುಲಿಕುಂಟೆ ಜವಾಬ್ದಾರಿಯನ್ನು ಪ್ರಜ್ವಲ್ ವಹಿಸಿಕೊಂಡಿದ್ದರು.
ಇಷ್ಟೆಲ್ಲ ಕಸರತ್ತು ಮಾಡಿದರೂ ಜೆಡಿಎಸ್ ಗೆ ತೀವ್ರ ಹಿನ್ನಡೆ ಆಗಿದೆ.

ಈ ಹಿಂದಿನ‌ ಚುನಾವಣೆಗಳಲ್ಲಿ ಲೀಡ್ ಪಡೆದಿದ್ದ ಮತಗಟ್ಟೆಗಳಲ್ಲೇ ಉಪಚುನಾವಣೆಯಲ್ಲಿ ಜೆಡಿಎಸ್ ಮತವನ್ನು ಪಡೆದಿಲ್ಲ. ಈಗಾಗಲೇ ಜೆಡಿಎಸ್ ನಿಂದ ಜಿಲ್ಲೆಯ ಹಲವು ನಾಯಕರು ಒಂದು ಕಾಲು ಹೊರಗಿಟ್ಟಿದ್ದಾರೆ.‌ ಭದ್ರಕೋಟೆಯಲ್ಲಿನ ಸೋಲು ವಲಸೆಯನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ.

09:3210 Nov 2020

21ನೇ ಸುತ್ತು ಬಿಜೆಪಿ ಮುನ್ನಡೆ

ಬಿಜೆಪಿ-66598
ಕಾಂಗ್ರೆಸ್-55725
ಜೆಡಿಎಸ್-30494
ನೋಟಾ-509

ಮತಗಳ ಅಂತರ-10873

09:3010 Nov 2020

ಖಚಿತವಾದ ಬಿಜೆಪಿ ಗೆಲುವು: ಅಧಿಕೃತ ಘೋಷಣೆ ಬಾಕಿ

09:0510 Nov 2020

10 ಸಾವಿರ ದಾಟಿದ ಬಿಜೆಪಿ ಲೀಡ್

ಶಿರಾ ಕ್ಷೇತ್ರದ 20ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದೆ. 10 ಸಾವಿರ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಗೆಲುವು ಖಚಿತ ಎನ್ನುವ ಸ್ಥಿತಿ ಇದೆ. 

ಬಿಜೆಪಿ-62481
ಕಾಂಗ್ರೆಸ್-52359
ಜೆಡಿಎಸ್-28439
ನೋಟಾ-509
ಬಿಜೆಪಿ ಅಂತರ-10122