ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ: ರೈತರಿಗೆ ಮಂದಹಾಸ

Last Updated 1 ಆಗಸ್ಟ್ 2021, 1:28 IST
ಅಕ್ಷರ ಗಾತ್ರ

ತಿಪಟೂರು: ಹಲವು ತಿಂಗಳಿನಿಂದ ಸ್ಥಿರವಾಗಿದ್ದ ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕ್ವಿಂಟಲ್‌ ಕೊಬ್ಬರಿ ಬೆಲೆ ₹17 ಸಾವಿರದ ಗಡಿ ದಾಟಿದೆ.

ಕೆಲ ರವಾನೆದಾರರು ಪ್ರಕಾರ ಹೊರ ರಾಜ್ಯದಲ್ಲಿ ಕೊಬ್ಬರಿಗೆ ಬೇಡಿಕೆ ಬಂದಿರುವ ಕಾರಣ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ರೈತರು ಬಹು ದಿನಗಳಿಂದ ಬೆಲೆ ಏರಿಕೆಗೆ ಕಾಯುತ್ತಿದ್ದರು. ಆದರೆ ಕೆಲ ತಿಂಗಳಿಂದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದೀಗ ₹17 ಸಾವಿರಕ್ಕೆ ತಲುಪಿರುವುದು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಕೊಂಚ ನೆಮ್ಮದಿ ನೀಡಿದೆ.

ಹೊರ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಮತ್ತೆ ಕೋವಿಡ್‌ ಲಾಕ್‌ಡೌನ್‌ ಘೊಷಣೆಯಾಗುವ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬರಿ ಅಮದು ಮಾಡಿಕೊಳ್ಳಲಾಗುತ್ತಿದೆ. ಎಣ್ಣೆ ಕಾಳುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಕೊಬ್ಬರಿ ಎಣ್ಣೆ ತಯಾರಿಕೆ, ಬಳಕೆ ಹೆಚ್ಚಿದೆ ಎನ್ನುತ್ತಾರೆ ರವಾನೆದಾರರು.

ಕೆಲ ತಿಂಗಳಿನಿಂದ ಎಪಿಎಂಸಿಗೆ ಉಂಡೆ ಕೊಬ್ಬರಿ ಬರುತ್ತಿರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಫಸಲು ಕಡಿಮೆ ಆಗಿರುವ ಬಗ್ಗೆ ರೈತರು ಮಾಹಿತಿ ನೀಡುತ್ತಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT