ಅಹಿಂಸಾತ್ಮಕ ಬಕ್ರೀದ್ ಆಚರಿಸಿ: ದಯಾನಂದ ಸ್ವಾಮೀಜಿ ಮನವಿ

7

ಅಹಿಂಸಾತ್ಮಕ ಬಕ್ರೀದ್ ಆಚರಿಸಿ: ದಯಾನಂದ ಸ್ವಾಮೀಜಿ ಮನವಿ

Published:
Updated:
Deccan Herald

ತುಮಕೂರು: ‘ಮುಸ್ಲಿಂ ಬಾಂಧವರೆ ಅಹಿಂಸಾತ್ಮಕವಾಗಿ ಬಕ್ರೀದ್ ಆಚರಿಸುವ ಮೂಲಕ ಕರ್ನಾಟಕವನ್ನು ಪ್ರಾಣಿ ಬಲಿ ಮುಕ್ತ ರಾಜ್ಯವನ್ನಾಗಿಸಲು ಕೈಜೋಡಿಸಿ’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಯಾವುದೇ ಜಾತಿ, ಧರ್ಮದ ಭೇದ ಭಾವ ಮಾಡುತ್ತಿಲ್ಲ. ಪ್ರಾಣಿ ಬಲಿಯನ್ನು ವಿರೋಧಿಸುತ್ತಿದ್ದೇನೆ ಅಷ್ಟೆ' ಎಂದು ತಿಳಿಸಿದರು.

ಮುಸ್ಲಿಮರಿಗಿಂತ ಹಿಂದೂ ಧರ್ಮದವರೆ ಹೆಚ್ಚು ಪ್ರಾಣಿ ಬಲಿಯನ್ನು ಮಾಡುತ್ತಿದ್ದಾರೆ. ಇಂದು ದೇಶದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದರ ಮೂಲಕ ದೇವಾಲಯಗಳನ್ನು ಕಸಾಯಿಖಾನೆಗಳಾಗಿ ಮಾರ್ಪಾಡು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಅನ್ವಯ ಯಾವುದೇ ಹಬ್ಬ ಹರಿದಿನಗಳಾಗಲಿ ಪ್ರಾಣಿ ಬಲಿಯನ್ನು ಮಾಡುವುದು ನಿಷಿದ್ಧ. ಹಾಗಾಗಿ ಕಾನೂನು ಉಲ್ಲಂಘನೆ ಮಾಡದೆ ಎಲ್ಲ ದಿನವು ಅಹಿಂಸಾತ್ಮಕವಾಗಿರುವಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಪ್ರತಿ ವರ್ಷ 1.5 ಕೋಟಿ ಪ್ರಾಣಿಗಳು ಬಲಿಯಾಗುತ್ತಿವೆ. ಇತ್ತೀಚೆಗೆ 800 ಸ್ಥಳಗಳಿಗೆ ಭೇಟಿ ನೀಡಿ ಪ್ರಾಣಿ ಹತ್ಯೆಯನ್ನು ತಡೆಯಲಾಗಿದೆ ಎಂದು ತಿಳಿಸಿದರು.

ಪ್ರಾಣಿ ಬಲಿ ತಡೆ ಸಮಿತಿ: ರಾಜ್ಯದಲ್ಲಿ ಹಬ್ಬದ ದಿನಗಳನ್ನೊಳಗೊಂಡಂತೆ ಅನಧಿಕೃತವಾಗಿ ಸಾಮೂಹಿಕ ಪ್ರಾಣಿ ಹತ್ಯೆಯನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸಮಿತಿಯನ್ನು ರಚಿಸಬೇಕು. ಈ ಮೂಲಕ ಪ್ರಾಣಿ ಬಲಿಯನ್ನು ತಡೆಯಬೇಕು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ ಎಂದು ದಯಾನಂದ ಸ್ವಾಮೀಜಿ ತಿಳಿಸಿದರು.

ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ, ಸದಸ್ಯರಾಗಿ ಜಿಲ್ಲಾ ಪೊಲೀಸ್ ವರಿಷ್ಠರು, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ, ಜಿಲ್ಲಾ ಸಾರಿಗೆ ಇಲಾಖಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪರಿಸರ ಅಧಿಕಾರಿ ಹಾಗೂ ನಗರ ಪಾಲಿಕೆ ಮುಖ್ಯಸ್ಥರು, ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !