ಶುಕ್ರವಾರ, ಫೆಬ್ರವರಿ 28, 2020
19 °C
ಯಕ್ಷದೀವಿಗೆ ಆಯೋಜಿಸಿದ್ಧ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಉಜಿರೆ ಅಶೋಕ ಭಟ್‌

ಕನ್ನಡದ ಉಳಿವಿಗಾಗಿ ಯಕ್ಷಗಾನ ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿಯೇ ಯುವ ತಲೆಮಾರಿಗೆ ಯಕ್ಷಗಾನ ಕಲಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸಲಹೆ ನೀಡಿದರು.

ಎಸ್.ಎಸ್.ಪುರಂನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷದೀವಿಗೆ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿಸುವುದರಲ್ಲಿ ಯಕ್ಷಗಾನದ ಕೊಡುಗೆ ಇದೆ. ಹೊಸ ತಲೆಮಾರು ಮೊಬೈಲ್ ಮಾಯೆಯಲ್ಲಿ ಮುಳುಗಿದೆ. ಅವರ ಹಿರಿಯರು ಧಾರಾವಾಹಿಗಳಲ್ಲಿ ಕಳೆದು ಹೋಗಿದ್ದಾರೆ ಎಂದರು.

ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡುವುದೇ ಇದಕ್ಕಿರುವ ಪರಿಹಾರ. ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಭಾಷೆ, ಭಾವ ಪರಿಷ್ಕರಣೆ ಆಗುತ್ತದೆ. ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.

’ಅತಿಕಾಯ ಕಾಳಗ’ ಎಂಬ ಬೋಧಪ್ರದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.

ಸಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ನಾಯಕ್ ಆಜೇರು, ಚೆಂಡೆ ವಾದಕರಾಗಿ ಪಿ.ಜಿ. ಜಗನ್ನಿವಾಸರಾವ್ ಪುತ್ತೂರು, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳ ಕಲಾವಿದರಾಗಿ ಮುರಳಿ ಭಟ್ ಬಾಯಾಡಿ ಸಹಕರಿಸಿದರು.

ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್ (ಅತಿಕಾಯ), ಶಶಾಂಕ ಅರ್ನಾಡಿ (ರಾವಣ ಮತ್ತು ವಿಭಿಷಣ), ಆರತಿ ಪಟ್ರಮೆ (ರಾಮ) ಹಾಗೂ ಸಿಬಂತಿ ಪದ್ಮನಾಭ (ಲಕ್ಷ್ಮಣ) ಇದ್ದರು. ಜ್ಞಾನಬುತ್ತಿ ಸತ್ಸಂಗದ ಕೃಷ್ಣಮೂರ್ತಿ, ಕಲಾವಿದರನ್ನು ಗೌರವಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)