ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಪ್ರೇಕ್ಷಕರ ನಾಟುವ ಕಲೆ: ಡಾ.ಎಸ್.ಪರಮೇಶ್

ಝೆನ್‌ ಟೀಮ್‌ನಿಂದ ನಾಟಕೋತ್ಸವ
Last Updated 1 ಅಕ್ಟೋಬರ್ 2021, 5:12 IST
ಅಕ್ಷರ ಗಾತ್ರ

ತುಮಕೂರು: ಟಿ.ವಿ, ಸಿನಿಮಾಕ್ಕಿಂತ ನಾಟಕ ಪ್ರತ್ಯಕ್ಷವಾಗಿ ಪ್ರೇಕ್ಷಕರನ್ನು ನಾಟುವ ಪ್ರಭಾವಶಾಲಿ ಕಲೆಯಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.

ಝೆನ್ ಟೀಮ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ನಾಟಕೋತ್ಸವ ಸಮಾರಂಭವನ್ನು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಕಲೆಗಳಲ್ಲಿ ನಾಟಕ ಅತ್ಯಂತ ಪ್ರಭಾವಶಾಲಿ ಕಲೆಯಾಗಿದ್ದು, ಪ್ರೇಕ್ಷಕರನ್ನು ರಂಜಿಸುವ ಜತೆಗೆ ನೇರವಾಗಿ ನಾಟುವ ಮೂಲಕ ಉದ್ದೀಪನಗೊಳಿಸುತ್ತದೆ. ನಾಟಕದ ವಸ್ತು, ವಿಷಯ ಅಳವಡಿಸಿಕೊಳ್ಳುವುದಷ್ಟೇ ಅಲ್ಲದೇ, ಬೇರೆಯವರಿಗೂ ಹೇಳಬಹುದಾಗಿದೆ ಎಂದರು.

ಆಧುನಿಕ ಜಗತ್ತಿನಲ್ಲಿ ಹಳೆಯ ಕಲೆಗಳನ್ನು ಮರೆಯುತ್ತಿದ್ದೇವೆ. ಪ್ರೇಕ್ಷಕರನ್ನು ನೇರವಾಗಿ ತಟ್ಟುವ ನಾಟಕದಂತಕ ಕಲೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಕೊಟ್ಟ ಶಂಕರ್, ‘ಜಿಲ್ಲೆಯಲ್ಲಿ ನಾಟಕ, ನಾಟಕೋತ್ಸವ ಏರ್ಪಡಿಸುವ ಮೂಲಕ ಸಾಂಸ್ಕೃತಿಕ ಲೋಕದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಝೆನ್‍ಟೀಮ್ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರವಾಡ್, ‘ನಾಟಕ ನೋಡುವ, ಸಂಗೀತ ಕೇಳುವ ಹವ್ಯಾಸವಿದೆ. ತಾವೊಬ್ಬ ಕಲಾಭಿಮಾನಿ’ ಎಂದರು. 8ನೇ ತರಗತಿ ಓದುತ್ತಿದ್ದಾಗ ಅಂಗೂಲಿಮಾಲಾ ನಾಟಕದಲ್ಲಿ ಪಾತ್ರಧಾರಿಯಾಗಿದ್ದ ಘಟನೆಯನ್ನು ಸ್ಮರಿಸಿದರು.

ಉಪನ್ಯಾಸಕಿ ಆರತಿ, ಝೆನ್‍ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಉಪಸ್ಥಿತರಿದ್ದರು. ಶಿಕ್ಷಕಿ ತೇಜಸ್ವಿನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT