ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಒಡೆತನವಷ್ಟೆ, ಹಕ್ಕಿಲ್ಲ: ರೈತರ ಅಳಲು

Last Updated 7 ಸೆಪ್ಟೆಂಬರ್ 2020, 1:25 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಕಳೆದ ಒಂದು ದಶಕದಲ್ಲಿ ರೈತರಿಗೆ ಸಾಗುವಳಿ ಚೀಟಿ ಮಾತ್ರ ವಿತರಿಸಲಾಗಿದೆ. ಆದರೆ ಸಾಗುವಳಿ ಚೀಟಿ ಪಡೆದ ರೈತರಿಗೆ ಖಾತೆ, ಪಹಣಿ ಆಗಿಲ್ಲ. ತಾಲ್ಲೂಕಿನಲ್ಲಿ ಬಗರ್ ಹುಕುಂ ಚೀಟಿ ಪಡೆದ ಕಳೆದ ಹತ್ತು ವರ್ಷಗಳ ಅವಧಿಯ ಎಲ್ಲ ರೈತರ ಸ್ಥಿತಿಯೂ ಇದೆ ಆಗಿದೆ.

ಮದನಮಡುವಿನಲ್ಲೇ ನಾನು ಉಳುಮೆ ಮಾಡುತ್ತಿದ್ದೇನೆ. ಸಾಗುವಳಿ ಚೀಟಿ ನೀಡಿದ್ದಾರೆ. ಪಹಣಿ ಮಾಡಿಲ್ಲ ಎಂದು ತಹಶೀಲ್ದಾರ್ ಅವರನ್ನು ವಿಚಾರಿಸಿದರೆ ಹಿಂದಿನವು ಬಾಕಿ ಇವೆ, ಅವುಗಳನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ. ಪಹಣಿ ಇಲ್ಲದೆ ಸರ್ಕಾರದ ಯಾವುದೇ ಯೋಜನೆಗೆ ನಾವು ಒಳಪಡಲು ಸಾಧ್ಯವಾಗುತ್ತಿಲ್ಲ. ಪಹಣಿ ಇಲ್ಲದೆ ಉಳುಮೆ ಮಾಡಿ ಕೃಷಿಗೆ ಹಣವೂಡಲು ಬ್ಯಾಂಕಿನಿಂದ ಸಾಲವೂ ಪಡೆಯಲಾಗುತ್ತಿಲ್ಲ. ಕೂಡಲೇ ತಹಶೀಲ್ದಾರ್ ಸಾಗುವಳಿ ಚೀಟಿ ನೀಡಿರುವವರಿಗೆ ಖಾತೆ ಮಾಡಿ ಪಹಣಿ ನೀಡಿ ಎಂದು ಮದನಮಡು ಗಂಗಾಧರಯ್ಯ ಒತ್ತಾಯಿಸಿದರು.

ಕಂದಿಕೆರೆ ಹೋಬಳಿ ಕಂದಾಯಧಿಕಾರಿ ಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ಬೆಂಗಳೂರಿನ ಆನ್‌ಲೈನ್ ಭೂಮಿ ಕೇಂದ್ರದಲ್ಲಿ ಬಗರ್ ಹುಕುಂಗೆ ಸಂಬಂಧಪಟ್ಟ ಸರ್ವರ್ ಆರಂಭ ಮಾಡಬೇಕು. ಈ ಸರ್ವರ್ ಕಳೆದ ಎರಡು ವರ್ಷದಿಂದ ಸ್ಥಗಿತವಾಗಿದೆ. ಇದರಿಂದ ರೈತರಿಗೆ ಸಾಗುವಳಿ ಚೀಟಿ ಕೊಟ್ಟರೂ ಖಾತೆ, ಪಹಣಿ ನೀಡಲಾಗಿಲ್ಲ. 2000ನೇ ಇಸವಿಯಿಂದ ಆನ್ ಲೈನ್ ಭೂಮಿ ಕೇಂದ್ರ ಆರಂಭವಾಯಿತು, ಈ ವೇಳೆ ಕೆಲವರು ಮಾತ್ರ ಖಾತೆ, ಪಹಣಿ ಮಾಡಿಸಿಕೊಂಡಿದ್ದಾರೆ. ಉಳಿದವರಿಗೆ ಸಾಗುವಳಿ ಚೀಟಿಯ, ಖಾತೆ, ಪಹಣಿ ಆಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT