ಆಸ್ತಿ ಮಾಲೀಕರು ಕಚೇರಿಗೆ ಬಂದು ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಸರ್ವರ್ ಸಮಸ್ಯೆಯಾಗಿದೆ. ಡಿ. 29ರಿಂದ ಇದು ಸರಿ ಹೋಗಲಿದೆ. ಜನರು ಇದರ ನೆರವು ಪಡೆಯಬೇಕು. ಅಗತ್ಯ ದಾಖಲೆ ಸಲ್ಲಿಸಿ ಮೊಬೈಲ್‌ನಲ್ಲಿ ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
– ಮನುಕುಮಾರ್, ಉಪ ಆಯುಕ್ತ ಮಹಾನಗರ ಪಾಲಿಕೆ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಇ–ಖಾತಾ ಮಾಡಿಸಲು ರಜೆ ಹಾಕಿಕೊಂಡು ಬರಬೇಕು. ಇಲ್ಲಿಗೆ ಬಂದರೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸುವುದಿಲ್ಲ. ಎಲ್ಲ ದಾಖಲೆ ತಂದರೂ ಮತ್ತೆ ಇನ್ನೇನೋ ಕೇಳುತ್ತಾರೆ. ಇದರಿಂದ ಖಾತೆ ಮಾಡಿಸುವುದು ಸವಾಲಾಗಿದೆ.
– ಹರಿ, ತುಮಕೂರು
ಎರಡು–ಮೂರು ದಿನಕ್ಕೊಮ್ಮೆ ಸರ್ವರ್ ಬ್ಯುಸಿ ಎನ್ನುತ್ತಿದ್ದಾರೆ. ಇದು ಎಂತಹ ಸರ್ವರ್ ಎಂಬುವುದು ಗೊತ್ತಾಗುತ್ತಿಲ್ಲ. ಪ್ರತಿ ದಿನ ಕಚೇರಿಗೆ ಬಂದು ಹೋಗುವುದೇ ಜನರ ಕಾಯಕವಾಗಿದೆ.
– ನರಸಿಂಹಯ್ಯ, ತುಮಕೂರು
ಇ–ಖಾತೆ ಅಷ್ಟೇ ಅಲ್ಲ. ಮಹಾನಗರ ಪಾಲಿಕೆಯಲ್ಲಿ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಕಳೆದ ಎಂಟು–ಹತ್ತು ದಿನಗಳಿಂದ ನೆಟ್‌ವರ್ಕ್ ಬರುತ್ತಿಲ್ಲ. ಕಚೇರಿಯಲ್ಲಿ ಕೇಳಿದರೆ ನೆಟ್‌ವರ್ಕ್ ಸಮಸ್ಯೆ ಎನ್ನುತ್ತಿದ್ದಾರೆ. ಹೀಗಾದರೆ ಜನರ ಕೆಲಸ ಮುಗಿಯುವುದು ಯಾವಾಗ?
– ದೊಡ್ಡಯ್ಯ, ತುಮಕೂರು
ಬೆಳಿಗ್ಗೆ ಬಂದರೆ ಮಧ್ಯಾಹ್ನ ಬನ್ನಿ ಎನ್ನುತ್ತಾರೆ. ಊಟದ ನಂತರ ಕಚೇರಿ ಕಡೆಗೆ ಹೋದರೆ ಅಧಿಕಾರಿ ಇರುವುದಿಲ್ಲ. ಕೇಳಿದರೆ ಸ್ಥಳ ಪರಿಶೀಲನೆಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಇಡೀ ವ್ಯವಸ್ಥೆ ಕೆಟ್ಟು ಹೋಗಿದೆ.
– ಲಕ್ಷ್ಮಿಕಾಂತ್, ಹನುಮಂತಪುರ
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದ ವಾಟರ್‌ಮ್ಯಾನ್ ಕರ ವಸೂಲಿಗಾರರೇ ಈಗ ಮಧ್ಯವರ್ತಿಯಾಗಿದ್ದಾರೆ. ಅವರೇ ಎಲ್ಲ ಕೆಲಸ ಮಾಡಿಸುತ್ತಾರೆ. ಅವರೇ ಮುಂದೆ ನಿಂತು ಅವರಿಗೆ ಬೇಕಾದವರಿಗೆ ಇ–ಖಾತಾ ಮಾಡಿಸಿಕೊಡುತ್ತಾರೆ. ಸಾಮಾನ್ಯ ಜನರ ಪಾಡು ಯಾರೂ ಕೇಳುವುದಿಲ್ಲ.