ಇತ್ತೀಚೆಗೆ 50 ಗ್ರಾಂ ಚಿನ್ನದ ಪದಕವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗಿದ್ದು, ವಿಷಯ ಬಹಿರಂಗಗೊಂಡು ವಿಚಾರಿಸಿದಾಗ ಅರ್ಚಕರೇ ಮಾರಾಟ ಮಾಡಿರುವ ಬಗ್ಗೆ ತಿಳಿದಿದೆ. ಗ್ರಾಮಸ್ಥರು ಅರ್ಚಕರ ಮನೆಗೆ ಬಂದಾಗ ಅರ್ಚಕ ಪರಾರಿಯಾಗಿದ್ದಾರೆ. ಇನ್ನಷ್ಟು ಒಡವೆಗಳು ಕಾಣೆಯಾಗಿರುವ ಶಂಕೆ ಇದೆ ಎಂದು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.