ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘದ ಸದಸ್ಯರ ಪ್ರವಾಸ

ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ: ಅಧ್ಯಕ್ಷರ ಜತೆ ಚರ್ಚೆ
Last Updated 28 ಸೆಪ್ಟೆಂಬರ್ 2022, 5:10 IST
ಅಕ್ಷರ ಗಾತ್ರ

ತಿಪಟೂರು: ಪಟ್ಟಣದ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಸದಸ್ಯರು ಅಧ್ಯಯನ ಪ್ರವಾಸದ ಅಂಗವಾಗಿ ಮಲೆನಾಡಿನ ಅಡಿಕೆ ಉತ್ಪಾದಕ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಶಿರಸಿಗೆ ಮಂಗಳವಾರ ಭೇಟಿ ನೀಡಿದ್ದರು.

ಶಿರಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಟಿಎಸ್‌ಎಸ್‌, ಟಿಎಂಎಸ್ ಮತ್ತು ಕದಂಬ ಸಹಕಾರ ಸಂಘಗಳಿಗೆ ಭೇಟಿ ನೀಡಿದರು. ಅಲ್ಲಿ ಸಹಕಾರ ಸಂಘಗಳ ಮೂಲಕ ನಡೆಯುತ್ತಿರುವ ಮಾರುಕಟ್ಟೆ ವ್ಯವಸ್ಥೆ, ರೈತರು ಬದುಕು ಕಟ್ಟಿಕೊಳ್ಳಲು ವಿಮೆ ಸೌಲಭ್ಯ, ಆರೋಗ್ಯ ವಿಮೆ, ಬೆಳೆಗಳ ಬೆಲೆ ಸ್ಥಿರತೆ, ಅಡಮಾನ ಸಾಲ ಸೌಲಭ್ಯ, ಸದಸ್ಯರಿಗೆ ಒಂದೇ ಸೂರಿನಡಿ ದಿನಬಳಕೆ ಹಾಗೂ ಕೃಷಿ ಉತ್ಪನ್ನ ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಉತ್ಪನ್ನಗಳ ಮೌಲ್ಯವರ್ಧನೆ, ವಿವಿಧ ಬಗೆಯ ಅಡಿಕೆ, ಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿದರು. ಶಿರಸಿ ಎಪಿಎಂಸಿ ಅಧ್ಯಕ್ಷ ಪ್ರಶಾಂತ್ ಬಸಪ್ಪ ಗೌಡ ಮತ್ತು ಶಿವಮೊಗ್ಗ ಮಲೆನಾಡು ಅಡಿಕೆ ಉತ್ಪಾದಕರ ಸಹಕಾರ ಸಂಘದ ಪ್ರಧಾನ ವ್ಯವಸ್ಥಾಪಕಿ ಜಯಂತಿ ಅವರಿಂದ ಮಾಹಿತಿ ಪಡೆದರು.

ತಿಪಟೂರು ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಮುಖ್ಯ ಪ್ರವರ್ತಕ ತ್ರಿಯಂಬಕ, ನಿವೃತ್ತ ಉಪ ವ್ಯವಸ್ಥಾಪಕ ಸಿದ್ದರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದಿವಾಕರ್ ಹೋಗನಘಟ್ಟ, ಕೃಷಿಕ ಸಮಾಜದ ಅಧ್ಯಕ್ಷ ಕೆರಗೋಡಿ ದೇವರಾಜ್, ಹಳೇಪಾಳ್ಯ ಸದಾಶಿವು, ಮಾರನಗೆರೆ ಮಂಜುನಾಥ್, ಶ್ರೇಷ್ಠನಾಥ್, ಅಶೋಕ್ ಕುಮಾರ್, ಹೊನ್ನೇನಹಳ್ಳಿ ಯಶೋದಮ್ಮ, ಬಿಸಲೇಹಳ್ಳಿ ಜಗದೀಶ್, ಶಿವಕುಮಾರ್, ಯತಿಕ್, ದೊಡ್ಡಯ್ಯ, ಮಹಾಂತೇಶ್, ಸ್ವಾಮಿ ಹಾಜರಿದ್ದರು.

‘ತಿಪಟೂರು ಕೊಬ್ಬರಿಗೆ ಪ್ರಖ್ಯಾತವಾಗಿದೆ. ಕೊಬ್ಬರಿ ಹೊರತಾಗಿ ಇತರೆ ವಾಣಿಜ್ಯ ಬೆಳೆಗಳನ್ನು ಕೊಳ್ಳಲು, ಮಾರಾಟ ಮಾಡಲು ಅನುವು ಮಾಡುವ ಸಲುವಾಗಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷಎಚ್.ಬಿ. ದಿವಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT