ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಟನ್ ಟೊಮೆಟೊ ಸಂಸ್ಕರಣೆ

Last Updated 8 ಏಪ್ರಿಲ್ 2020, 14:24 IST
ಅಕ್ಷರ ಗಾತ್ರ

ತುಮಕೂರು: ವಸಂತ ನರಸಾಪುರದ ಫುಡ್‍ಪಾರ್ಕ್‌ನಿಂದ ದಿನಬಿಟ್ಟು ದಿನ ರೈತರಿಂದ 100ರಿಂದ 150 ಟನ್‍ ಟೊಮೆಟೊ ಖರೀದಿಸಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಹಣ್ಣು ಮತ್ತು ತರಕಾರಿ ಮಾರಾಟ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಬೆಳೆದಿರುವ ಹಣ್ಣು, ತರಕಾರಿಗಳನ್ನು ತೋಟಗಳಿಂದಲೇ ನೇರವಾಗಿ ಖರೀದಿಸಿ ನಗರ, ಗ್ರಾಮೀಣ ಭಾಗದ ಗ್ರಾಹಕರ ಮನೆ ಬಾಗಿಲಿಗೆ ರಿಯಾಯಿತಿ ದರದಲ್ಲಿ ತಲುಪಿಸಲಾಗುತ್ತಿದೆ ಎಂದರು.

ರೈತರು ಮತ್ತು ಗ್ರಾಹಕರ ನಡುವಿನ ಈ ವ್ಯಾಪಾರಕ್ಕೆ ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಹಾಗೂ ಎಲ್ಲ ತಾಲ್ಲೂಕುಗಳ ತೋಟಗಾರಿಕೆ ಇಲಾಖೆಗಳ ಹಿರಿಯ ಸಹಾಯಕ ನಿರ್ದೇಶಕರು ನೋಡಲ್ ಅಧಿಕಾರಿಗಳಾಗಿದ್ದಾರೆ. ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಉಪವಿಭಾಗಾಧಿಕಾರಿ ಅಜಯ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ರಘು, ಡಿಎಚ್‌ಒ ಡಾ.ಚಂದ್ರಿಕಾ, ಹನಿಮಿತ್ರ ಸಂಸ್ಥೆ ಮುಖ್ಯಸ್ಥ ನೀಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT