ಕಚೇರಿಗೆ ಅಲೆಯುವ ಅಗತ್ಯವಿಲ್ಲ
ತುರುವೇಕೆರೆ ಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ 4.900 ಇ-ಖಾತೆಗಳು ಆಗಿವೆ. ಇನ್ನೂ 4000 ಬಾಕಿ ಇದ್ದು ಆಸ್ತಿ ಮಾಲೀಕರು ತಮ್ಮ ಮನೆಯಲ್ಲೇ ಆನ್‌ಲೈನ್ ಅಥವಾ ಗ್ರಾಮ್ ಒನ್‌ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಹಾಕಿದರೆ ಅದು ಪಟ್ಟಣ ಪಂಚಾಯಿತಿ ಲಾಗಿನ್‌ಗೆ ಬರುತ್ತದೆ. ಅದನ್ನು ಕಚೇರಿ ದಾಖಲೆಯೊಂದಿಗೆ ಪರಿಶೀಲಿಸಿ ಅನುಮೋದನೆ ನೀಡಲಾಗುವುದು. ಇದಕ್ಕಾಗಿ ಕಚೇರಿಗೆ ಜನರು ಅಲೆಯುವ ಅಗತ್ಯವಿಲ್ಲ. ಪಟ್ಟಣಿಗರು ಇ-ಸ್ವತ್ತು ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.