ತುರುವೇಕೆರೆ: ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಗ್ರಾಹಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಎನ್.ಆರ್. ಸುರೇಶ್ ಮಾತನಾಡಿ, ಬೆಸ್ಕಾಂ ಅಧಿಕಾರಿಗಳಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದಿನ ರೀಡಿಂಗ್ ಸರಿಯಾಗಿ ನೀಡದ ಕಾರಣ ಸಮಸ್ಯೆಯಾಗಿದೆ ಎಂದರು.

ಹಿಂದಿನ ಬಾಕಿಯನ್ನು ಈಗ ಸೇರಿಸಿ ಬಿಲ್ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಗ್ರಾಹಕರು ಈ ಹಿಂದಿನ ಬಿಲ್ ಅನ್ನು ಕಟ್ಟಿದ್ದಾರೆ ಎಂದು ಪ್ರತಿಭಟನನಿರತರು
ಹೇಳಿದರು.

ಇದೀಗ ಏಕಾಏಕಿ ₹40 ಸಾವಿರ, ₹80 ಸಾವಿರ ಕಟ್ಟಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಗಮನ ಹರಿಸಿ ಗ್ರಾಹಕರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಡಾ.ಚೇತನ್ ಮಾತನಾಡಿ, ಪ್ರತಿ ತಿಂಗಳು ಗ್ರಾಹಕರು ತಪ್ಪದೆ ಬಿಲ್ ಕಟ್ಟುತ್ತಿರುವಾಗ ಇಷ್ಟೊಂದು ಬಾಕಿ ಎಲ್ಲಿಂದ ಬಂತು? ಇಷ್ಟು ದಿನ ಬೆಸ್ಕಾಂ ಬಾಕಿ ವಸೂಲಿ ಮಾಡದೆ ಬಿಟ್ಟಿದ್ದು ಏಕೆ? 30 ಯೂನಿಟ್‌ಗೆ ಒಂದು ದರ, 50 ಯೂನಿಟ್, 100 ಯುನಿಟ್ ಹೀಗೆ ಒಂದೊಂದು ಹಂತಕ್ಕೆ ಇಷ್ಟಿಷ್ಟು ಹಣ ಎಂದು ದರ ನಿಗದಿಯಾಗಿದೆ. ರೀಡಿಂಗ್‌ನವರು ಸಮರ್ಪಕ ಕರ್ತವ್ಯ ನಿರ್ವಹಿಸದ ಕಾರಣ ಹೆಚ್ಚು ಯೂನಿಟ್‌ಗಳ ಮೇಲೆ ವಿಧಿಸಿರುವ ಹೆಚ್ಚಿನ ದರ ಹಾಗೂ ಬಡ್ಡಿ ದರ ಎರಡೂ ಸೇರಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ. ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ ಎಂದು ಆಗ್ರಹಿಸಿದರು.

ನಿವೃತ್ತ ಶಿಕ್ಷಕರಾದ ಶಿವಣ್ಣ, ಪುಟ್ಟ ನಂಜೇಗೌಡ್ರು, ಶಿವಶಂಕರ್, ಶಿಕ್ಷಕಿ ಲತಾ, ಸ್ಥಳೀಯರಾದ ಜಯಲಕ್ಷ್ಮಮ್ಮ, ಪಾರ್ವತಮ್ಮ, ಆಶಾ, ಮಲ್ಲಿಕಾರ್ಜುನ, ಮೂರ್ತಿ, ಸುರೇಶ್,
ಮಂಜಣ್ಣ, ಬಸವಣ್ಣ, ಸತೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.