ಗುರುವಾರ , ಜನವರಿ 28, 2021
15 °C
ರಾಜ್ಯ ಸರ್ಕಾರಕ್ಕೆ ಜ.14ವರೆಗೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

2ಎ ಮೀಸಲಾತಿ ನೀಡದಿದ್ದರೆ ವಿಧಾನಸೌಧ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪಂಚಮಸಾಲಿ ಲಿಂಗಾ ಯತರಿಗೆ`2ಎ' ಮೀಸಲಾತಿ ನೀಡುವು ದಾಗಿ ಮತ್ತು ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದಾಗಿ ಜ.14ರ ಮಕರ ಸಂಕ್ರಾತಿಯ ಒಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘೋಷಣೆ ಗಳನ್ನು ಮಾಡಿದರೆ ರಾಜ್ಯ ಹಾಗೂ ಕೇಂದ್ರ
ಸರ್ಕಾರಕ್ಕೆ ಅಭಿನಂದ ನೆಯ ವಿಜಯೋತ್ಸವ ಸಲ್ಲಿಸಲಾಗುವುದು. ಇಲ್ಲದಿದ್ದರೆ ಜ.14ರಿಂದ ಕೂಡಲ ಸಂಗಮದಿಂದ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪಂಚಮಸಾಲಿ ಸಮಾಜವು ಬಹು ತೇಕ ಕೃಷಿಯನ್ನೇ ಕಾಯಕವನ್ನಾಗಿ ಮಾಡಿ ಕೊಂಡಿದೆ. ಶೇ 95 ರಷ್ಟು ಮಂದಿ ಆರ್ಥಿಕ
ವಾಗಿ ಹಿಂದುಳಿದಿದ್ದಾರೆ ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಕಾರಣ ಮಕರ ಸಂಕ್ರಾಂತಿವರೆಗೆ ಅಂತಿಮ ಗಡುವು ನೀಡಿದ್ದೇವೆ ಎಂದರು.

ಸಂಕ್ರಾಂತಿಯೊಳಗೆ ಮೀಸಲಾತಿ ವಿಚಾರದಲ್ಲಿ ಸ್ಪಂದಿಸದಿದ್ದರೆ ಕೂಡಲಸಂಗಮದಲ್ಲಿ ಜ.14 ರಂದು ಬಸವಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಸಿ 5ರಿಂದ 7 ಲಕ್ಷ ಪಂಚಮಸಾಲಿ ಲಿಂಗಾಯತರೊಡಗೂಡಿ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ
ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ, ಯುವಘಟಕದ ಅಧ್ಯಕ್ಷ ಸೋಮಶೇಖರ ಆಲ್ಯಾಳ, ಅಮರೇಶ ನಾಗೂರ, ತಿಪ್ಪೇಸ್ವಾಮಿ, ಶಿವನಗೌಡ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.