ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಮಹಿಳಾ ನೌಕರರ ಉತ್ಸಾಹ

ಸರ್ಕಾರಿ ನೌಕರರ ಸಂಘದ ಚುನಾವಣೆ: ಮಧ್ಯಾಹ್ನದ ಬಳಿಕ ಚುರುಕು ಕಂಡ ಮತದಾನ
Last Updated 13 ಜೂನ್ 2019, 17:12 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಗುರುವಾರ ಚುನಾವಣೆ ಜಿಲ್ಲೆಯಾದ್ಯಂತ ಅತ್ಯಂತ ತುರುಸಿನಿಂದ ನಡೆಯಿತು.

ವಿವಿಧ ಇಲಾಖೆಗಳಿಂದ ನಿಗದಿತ ಸ್ಥಾನಕ್ಕೆ ಕಣಕ್ಕಿಳಿದ ಅಭ್ಯರ್ಥಿಗಳು ಮತಗಟ್ಟೆಗಳ ಮುಂದೆ ನಿಂತು ಮತದಾರರ ಒಲೈಕೆಗೆ ಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಆರಂಭದಲ್ಲಿ ಮತದಾನಕ್ಕೆ ಅಷ್ಟಾಗಿ ನೌಕರರು ಕಾಣಿಸಲಿಲ್ಲ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಏಕ ಕಾಲಕ್ಕೆ ಮತದಾನಕ್ಕೆ ಧಾವಿಸಿದರು.

ತುಮಕೂರಿನಲ್ಲಿ ಮತಗಟ್ಟೆಗಳಲ್ಲಿ ನೌಕರರ ನೂಕು ನುಗ್ಗಲು ಕಂಡು ಬಂದಿತು. ವಿಶೇಷವಾಗಿ ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದರು.

ನಗರದ ಗುಂಚಿ ವೃತ್ತದಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪ್ರಾಥಮಿಕ ಶಾಲೆಗಳ ವಿಭಾಗಕ್ಕೆ ಸಂಬಂಧಿಸಿದ ಸ್ಥಾನಕ್ಕೆ ಮಾತ್ರ ಮತದಾನ ನಡೆಯಿತು.

ಈ ವಿಭಾಗಕ್ಕೆ ನಿಗದಿಪಡಿಸಿದ 4 ಸ್ಥಾನಕ್ಕೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಪೈಪೋಟಿ ಸಹಜವಾಗಿ ಕಂಡು ಬಂದಿತು. ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಅವರ ಒಲೈಕೆಗೆ ಹರಸಾಹಸ ಪಡುತ್ತಿದ್ದುದು ಕಂಡು ಬಂದಿತು.

ಉಳಿದ ಇಲಾಖೆಗೆ ಸಂಬಂಧಿಸಿದ ಕ್ಷೇತ್ರಗಳ ಚುನಾವಣೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರದ ಹಳೆ ಮಾರ್ಕೆಟ್‌ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಿತು.

ಚುನಾವಣಾಧಿಕಾರಿ ಬಿ.ಕೆ.ಸತ್ಯಕುಮಾರಿ ಚುನಾವಣೆ ಪ್ರಕ್ರಿಯೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT