ಶನಿವಾರ, ಏಪ್ರಿಲ್ 17, 2021
23 °C
ಮೂರು ದಿನಗಳಿಂದ ಸ್ಥಗಿತಗೊಂಡಿತ್ತು

ಮತ್ತೆ ಮದಲೂರು ಕೆರೆಗೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಹೇಮಾವತಿ ನೀರು ಮತ್ತೇ ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ನವಂಬರ್ 30 ರಂದು ಮದಲೂರು ಕೆರೆಗೆ ನೀರು ಸೋಮವಾರದಿಂದ ಸ್ಥಗಿತಗೊಂಡಿದ್ದು, ನಾಲೆ ಹಾದು ಬರುವ ಮಾರ್ಗದಲ್ಲಿರುವ ಅಜ್ಜೇನಹಳ್ಳಿ, ಭೂಪಸಂದ್ರ, ಮಾಯಸಂದ್ರ, ಚಿಕ್ಕಗೂಳ ಸೇರಿದಂತೆ ಈ ಭಾಗ ಜನರು ನಾಲೆಗೆ ಪೈಪ್ ಹಾಕಿ ನೀರನ್ನು ಅವರ ಊರುಗಳ ಕೆರೆಗಳಿಗೆ ಹರಿಸಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಭೂಪಸಂದ್ರ ಮತ್ತು ಅಜ್ಜೇನಹಳ್ಳಿ ಭಾಗದ ರೈತರು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಭೇಟಿಯಾಗಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕನಿಷ್ಠ ಒಂದು ವಾರ ನೀರು ಹರಿಸುವಂತೆ ಮನವಿ ಮಾಡಿದ್ದರು.

ಶಾಸಕರು ಇವರಿಗೆ ಯಾವುದೇ ರೀತಿಯ ಭರವಸೆಯನ್ನು ನೀಡಿರಲಿಲ್ಲ. ಬುಧವಾರ ಅಧಿಕಾರಿಗಳು ತೆರಳಿ ನಾಲೆಯಲ್ಲಿ ಹಾಕಿದ್ದ ಪೈಪ್‌ಗಳನ್ನು ಹಾಗೂ ಅಡ್ಡವಾಗಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ಮದಲೂರು ಕೆರೆಗೆ ನೀರು ಹರಿಯುವಂತೆ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.