ಬುಧವಾರ, ಜೂನ್ 16, 2021
28 °C

ಗಾಳಿ: ನೆಲಕ್ಕುರುಳಿದ ವಿದ್ಯುತ್ ಕಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಗಾಳಿ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಸೋಮವಾರ ರಾತ್ರಿ ತಾಲ್ಲೂಕಿನ ಹಲವೆಡೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಜನತಾ ಕಾಲೊನಿಯಲ್ಲಿ ಮರದ ಕೊಂಬೆ ಮುರಿದು ಬಿದ್ದು ವಿದ್ಯುತ್ ಕಂಬ, ಗಿರೇನಹಳ್ಳಿಯಲ್ಲಿ 4, ಬಳ್ಳೇಕಟ್ಟೆಯಲ್ಲಿ 2, ಚಾಕುವಳ್ಳಿಯಲ್ಲಿ 2, ಹೆಗ್ಗೆರೆಯಲ್ಲಿ ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಗಿರೇನಹಳ್ಳಿಯ ಕನಕಮ್ಮ ಅವರ ಮನೆಯ ಹಂಚುಗಳು ಗಾಳಿಗೆ ಹಾರಿಹೋಗಿವೆ. ಕೆ.ಮಾವಿನಹಳ್ಳಿ 3, ಸಾದರಹಳ್ಳಿಗೊಲ್ಲರಹಟ್ಟಿ 1, ಗುರುವಿನಮಠದಲ್ಲಿ ಟ್ರಾನ್ಸ್‌ಫಾರಂ ಸೇರಿ 4 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸಾದರಹಳ್ಳಿ ಗೊಲ್ಲರಹಟ್ಟಿಯ ವಸಂತ್ ಕುಮಾರ್ ಅವರ ತೋಟದಲ್ಲಿ 2 ತೆಂಗಿನ ಮರಗಳು ನೆಲಕ್ಕುರುಳಿವೆ.

ಕುಣಿಕೇನಹಳ್ಳಿ ರಂಗನಾಥ್ ಪುರದ ಕುಮಾರಯ್ಯ ಅವರ ಮನೆಯ ಶೀಟ್ ಗಾಳಿಗೆ ಹಾರಿಹೋಗಿವೆ.

ಮಸರುಕೊಟ್ಟಿಗೆಯಲ್ಲಿ ಟ್ರಾನ್ಸ್‌ಫಾರಂ ಪೆಟ್ಟಿಗೆ ಸೇರಿ 7 ವಿದ್ಯುತ್ ಕಂಬ, ಮುನಿಯೂರು 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೀನಾಕ್ಷಪುರದಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿ ತುಂಡರಿಸಿವೆ. ತಾಲ್ಲೂಕು ಕಚೇರಿ ಆವರಣದಲ್ಲಿದ್ದ ಬೇವಿನಮರ ಮುರಿದು ಬಿದ್ದಿದೆ. ಮಾಯಸಂದ್ರ ರಸ್ತೆಯಲ್ಲಿನ ಕೋಳಿಯಂಗಡಿ ಚರಂಡಿಗೆ ನೀರು ನುಗ್ಗಿದೆ. ವಿದ್ಯುತ್ ಕಂಬಗಳು ಮಳೆಗಾಳಿ ಹಾನಿಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಸೋಮವಾರ ರಾತ್ರಿ ವಿದ್ಯುತ್ ವ್ಯತ್ಯಯವಾಗಿತ್ತು.

ಬೆಸ್ಕಾಂ ಶಾಖಾಧಿಕಾರಿ ಸೋಮಶೇಖರ್, ಉಮೇಶ್ವರಯ್ಯ, ಗಿರೀಶ್, ಕಾಂತರಾಜು ಗ್ರಾಮಲೆಕ್ಕಾಧಿಕಾರಿ ಷಾಹನೂರು ಅಲಿ, ಸಿಬ್ಬಂದಿ ಪ್ರಕಾಶ್, ಶಿವಶಂಕರ್, ಪವನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.