ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ಅಪಘಾತ: ಮಹಿಳೆ ಸಾವು, 6 ಜನರಿಗೆ ಗಾಯ

Published 18 ಫೆಬ್ರುವರಿ 2024, 6:12 IST
Last Updated 18 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಶಿರಾ: ನಗರ ಹೊರವಲಯದ ಉಲ್ಲಾಸ್‌ತೋಪು ಬಳಿ ಶನಿವಾರ ರಾತ್ರಿ ಕಾರು ಹಾಗೂ ಟ್ರ್ಯಾಕ್ಟರ್‌ ಮಧ್ಯೆ ನಡೆದ ಅಪಘಾತದಲ್ಲಿ ತಾಲ್ಲೂಕಿನ ಯಲಿಯೂರು ಗ್ರಾಮದ ರೇಖಾ (27) ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ.

ಯಲಿಯೂರು ಹಾಗೂ ಹೆಗ್ಗನಹಳ್ಳಿ ಗ್ರಾಮದಿಂದ ಮಧುಗಿರಿ ತಾಲ್ಲೂಕಿನ ಕೂನನಹಳ್ಳಿ ಹತ್ತಿರದ ಶನಿ ಮಹಾತ್ಮ ದೇವಸ್ಥಾನಕ್ಕೆ ಹೋಗುವಾಗ ಟ್ರಾಕ್ಟರ್‌ಗೆ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ರೇಖಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಮಲಮ್ಮ, ಮನು, ಚಾಲಕ ಸಾಗರ್, ಸರಸ್ವತಮ್ಮ ಹಾಗೂ ಇನ್ನಿಬ್ಬರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಮಲಮ್ಮ ಮತ್ತು ಸಾಗರ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT