ತಿಪಟೂರು: ನಗರಸಭೆಯ ನೂತನ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಎ.ಎಸ್.ಯಮುನಾ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಕೆ.ಎಸ್.ಮೇಘಾಶ್ರೀ ಭೂಷಣ್ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, 13ನೇ ವಾರ್ಡ್‌ನ ಯಮುನಾ 18 ಮತ ಪಡೆದು, ಪ್ರತಿಸ್ಪರ್ಧಿ ಬಿಜೆಪಿಯ ಲತಾ ಲೋಕೇಶ್ ವಿರುದ್ಧ 3 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಮೇಘಾಶ್ರೀ ಹಾಗೂ ಬಿಜೆಪಿಯಿಂದ ಸಂಗಮೇಶ್ ಸ್ಪರ್ಧಿಸಿದ್ದರು. 3 ಮತಗಳ ಅಂತರದಿಂದ ಮೇಘಾಶ್ರೀ ಗೆಲುವು ಪಡೆದರು.
ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ ಕೆ.ಷಡಕ್ಷರಿ ಇತರರು ಹಾಜರಿದ್ದರು.