ತುರುವೇಕೆರೆ: ಕೊಬ್ಬರಿ ಖರೀದಿ ಕೇಂದ್ರ ಜೂನ್ 12ರಂದೇ ಆರಂಭವಾಗಿದೆ ಎಂಬ ಸರ್ಕಾರದ ಘೋಷಣೆ ನೆಚ್ಚಿ ಕೊಬ್ಬರಿ ತಂದ ಹಲ ರೈತರು ಮಾರಾಟ ಮಾಡಲಾಗದೆ ವಾಪಸ್ ಹೋದ ಘಟನೆ ಗುರುವಾರ ನಡೆಯಿತು.

ಸರ್ಕಾರ ಜೂನ್ 12ರಿಂದಲೇ ಕೊಬ್ಬರಿ ಖರೀದಿ ಕೇಂದ್ರ ತೆರೆಯುವುದಾಗಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಹಲ ರೈತರು ಗುರುವಾರ ಬೆಳಿಗ್ಗೆ ಎಪಿಎಂಸಿಯಲ್ಲಿನ ಖರೀದಿ ಕೇಂದ್ರಕ್ಕೆ ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಚೀಟಿ, ಆರ್ಟಿಸಿ ಮುಂತಾದ ದಾಖಲೆಗಳೊಂದಿಗೆ ಕೊಬ್ಬರಿ ತಂದಿದ್ದರು.

ಆದರೆ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಖರೀರಿ ಆರಂಭಿಸಿಲ್ಲ ಎಂದು ತಿಳಿದು ನಿರಾಸೆಗೊಂಡರು. ಹಲವರು ಖಾಸಗಿ ಮಾರಾಟಗಾರರಿಗೆ ಕೊಬ್ಬರಿ ಮಾರಿ ಖರ್ಚಿಗೆ ಹಣ ಮಾಡಿಕೊಂಡು ವಾಪಸ್ ಹೋದರು.

ಸ್ಥಳದಲ್ಲಿ ಹಾಜರಿದ್ದ ಸಹಕಾರಿ ಮಹಾಮಂಡಲದ ಖರೀದಿ ಅಧಿಕಾರಿಗಳು ತಾಂತ್ರಿಕ ಕಾರಣಗಳಿಂದ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಗೋದಾಮು ತೆರವು ಮಾಡಿಕೊಟ್ಟಿಲ್ಲ. ಕೊಬ್ಬರಿ ಸಂಗ್ರಹಕ್ಕೆ ಬೇಕಾದ ಚೀಲಗಳಿನ್ನೂ ಬಂದಿಲ್ಲ. ಹೀಗಾಗಿ ಜೂನ್ 20ರಿಂದ ಕೇಂದ್ರದಲ್ಲಿ ಕೊಬ್ಬರಿ ಕೊಳ್ಳಲಾಗುವುದು.

ಈಗಾಗಲೇ ರೈತರಿಗೆ ಕೊಬ್ಬರಿ ತರಲು ದಿನಾಂಕ ನಿಗದಿ ಮಾಡಿದ್ದು, ಪ್ರತಿ ದಿನ 250-300 ಚೀಲ ಕೊಬ್ಬರಿ ಕೊಳ್ಳಲಾಗುವುದು ಎಂದರು.

ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಜೂನ್ 17ರ ಸೋಮವಾರ ಖರೀದಿ ಕೇಂದ್ರವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಾಗುವುದು. ಗೋದಾಮಿನಲ್ಲಿನ ಕಬ್ಬಿಣದ ದಾಸ್ತಾನನ್ನು ಕೂಡಲೇ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ಖರೀದಿ ಕೇಂದ್ರ ತೆರೆಯುವ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್ಗೆ ರೂ.550ರಷ್ಟು ಏರಿದ್ದು, ಗುರುವಾರ ಕ್ವಿಂಟಲ್ ಕೊಬ್ಬರಿ ರೂ.4950 ಧಾರಣೆ ಬಂದಿತ್ತು. ಖರೀದಿ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಸಹಾಯಧನ ರೂ.1000 ಸೇರಿದಂತೆ ಕ್ವಿಂಟಲ್ಗೆ ರೂ.6500 ಸಿಗುವುದರಿಂದ ರೈತರು ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟ ಮಾಡಲು ಹೆಚ್ಚು ಆಸಕ್ತಿ ತೋರಲಿಲ್ಲ. ಖರೀದಿ ಕೇಂದ್ರದಲ್ಲಿ 10 ಕ್ವಿಂಟಲ್ ಕೊಬ್ಬರಿ ಮಾತ್ರ ಕೊಳ್ಳುವ ಅವಕಾಶವಿದ್ದು, ಅದನ್ನು 25ಕ್ವಿಂಟಲ್ಗೆ ಏರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತೆಂಗು: ಪರಿಹಾರಕ್ಕೆ ಆಗ್ರಹ

ತುರುವೇಕೆರೆ: ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಹೆಚ್ಚು ಹೆಚ್ಚು ಜನ ಅವಲಂಬಿತರಾಗುತ್ತಿರುವುದು ಕೌಟಂಬಿಕ ಮೌಲ್ಯಗಳ ಅಧಃಪತನದಂತೆ ಭಾಸವಾಗುತ್ತಿದೆ. ಸರ್ಕಾರ ನೀಡುವ ಈ ಸವಲತ್ತನ್ನು ಅನಿವಾರ್ಯತೆ ಇರುವವರು ಮಾತ್ರ ಪಡೆಯಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಗುರುವಾರ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಸಾವಿರಾರು ತೆಂಗಿನಮರ ನೀರಿಲ್ಲದೆ ನೆಲಕಚ್ಚಿವೆ. ಸರ್ಕಾರ ಗಿಡವೊಂದಕ್ಕೆ ನೂರು, ಇನ್ನೂರು ರೂಪಾಯಿ ಪರಿಹಾರ ನೀಡುವ ಮಾತಾಡುತ್ತಿದೆ. ರೈತರಿಗೆ ಇಂಥ ಭಿಕ್ಷೆ ಬೇಕಿಲ್ಲ. ರೈತರು ಸ್ವಾಭಿಮಾನದಿಂದ ಬದುಕುವಂತೆ ನೆಲ ಕಚ್ಚಿರುವ ಪ್ರತಿ ಮರಕ್ಕೆ ಕನಿಷ್ಠ ರೂ.25 ಸಾವಿರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಂಧ್ಯಾ ಸುರಕ್ಷಾ ಯೋಜನೆಯಡಿ 215, ವಿಧವಾ ವೇತನ ಯೋಜನೆಯಡಿ 114, ಅಂಗವಿಕಲರ ವೇತನ ಯೋಜನೆಯಡಿ 80, ವೃದ್ಧಾಪ್ಯ ವೇತನ ಯೋಜನೆಯಡಿ ಐವರು ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ರಾಷ್ಟ್ರೀಯ ಕೌಟುಂಬಿಕ ಪರಿಹಾರ ನಿಧಿಯಿಂದ 78 ಮಂದಿ ವಿಧವೆಯರಿಗೆ ತಲಾ ರೂ.10 ಸಾವಿರ ವಿತರಿಸಲಾಯಿತು.

ತಹಶೀಲ್ದಾರ್ ಮಂಜೇಗೌಡ, ಶಿರಸ್ತೇದಾರ್ ಬಸವರಾಜು, ಈಶ್ವರಯ್ಯ ಇತರರು ಭಾಗವಹಿಸಿದ್ದರು.

ಕೊಬ್ಬರಿ ಖರೀದಿಗೆ ಇಂದು ಚಾಲನೆ
ತಿಪಟೂರು: ಕೇಂದ್ರ ಸರ್ಕಾರದ ರೂ. 5500 ಬೆಂಬಲ ಬೆಲೆ, ರಾಜ್ಯ ಸರ್ಕಾರದ 1 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಿ ಕೊಬ್ಬರಿ ಖರೀದಿಸುವ ನಫೆಡ್ ಕೇಂದ್ರವನ್ನು ನಗರದ ಎಪಿಎಂಸಿಯಲ್ಲಿ ಶುಕ್ರವಾರ ತೆರೆಯಲಾಗುತ್ತದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ರೂ. 700ರಿಂದ 1 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ವೈಯಕ್ತಿಕವಾಗಿ ಶ್ರಮ ಹಾಕಿದ್ದು ಫಲಿಸಿದೆ. ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಬಗ್ಗೆ ವಿಶೇಷ ಕಾಳಜಿ ತೋರಿದೆ. ಈಗ ಕ್ವಿಂಟಲ್ಗೆ ಒಟ್ಟು ರೂ. 6500 ದೊರೆಯುವುದರಿಂದ ರೈತರಿಗೆ ಒಂದಷ್ಟು ನೆರವಾಗುತ್ತದೆ ಎಂದು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರೋತ್ಸಾಹ ಧನವನ್ನು 10 ಕ್ವಿಂಟಲ್ಗೆ ಮಾತ್ರ ಮಿತಿಗೊಳಿಸಿರುವುದು ಕಣ್ತಪ್ಪಿನಿಂದ ಜಾರಿಯಾಗಿದೆ. ಸಂಬಂಧಿಸಿದ ಸಚಿವರಿಗೆ ರೈತರ ಸಮಸ್ಯೆಯನ್ನು ವೈಯಕ್ತಿಕವಾಗಿ ವಿವರಿಸಿದ್ದೇನೆ. ಅವರು ಪ್ರೋತ್ಸಾಹ ಧನ ಖರೀದಿ ಮಿತಿಯನ್ನು 20 ಕ್ವಿಂಟಲ್ಗೆ ವಿಸ್ತರಿಸಲು ಒಪ್ಪಿದ್ದಾರೆ.

ನಾಳೆಯೇ ತಿದ್ದುಪಡಿ ಆದೇಶ ಬರಬಹುದು. ಇಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಕೊಬ್ಬರಿ ಕೊಂಡ ವಾರದಲ್ಲೇ ರೈತರಿಗೆ ಚೆಕ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಬೆಂಬಲ ಬೆಲೆ, ಪ್ರೋತ್ಸಾಹ ಧನದ ಹಣವನ್ನು ರಾಜ್ಯ ಸರ್ಕಾರವೇ ಆವರ್ತ ನಿಧಿಯಿಂದ ಮುಂಗಡ ಪಾವತಿಸಲಿದೆ. ಕೇಂದ್ರ ಸರ್ಕಾರದ ಪಾಲನ್ನು ನಂತರ ಪಡೆಯಲಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಮಾರುಕಟ್ಟೆಯಲ್ಲಿ ತೆರಿಗೆ ವಂಚಿಸಿ ವ್ಯವಹರಿಸುವವರಿಗೆ ಕಡಿವಾಣ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಲಾಗಿದೆ. ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ನಗರದ ಮುಂದಿನ ಹಿತದೃಷ್ಟಿಯಿಂದ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಪ್ರಸ್ತಾವನೆ ಸಿದ್ಧವಾಗಿದೆ. ಸುಮಾರು ರೂ. 96.25 ಕೋಟಿ ಮೊತ್ತದ ಅಂದಾಜು ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ರಾಜ್ಯ ಸಲ್ಲಿಸಲಿದೆ. ಕಾಲಮಿತಿಯಲ್ಲಿ ಅದು ಅನುಷ್ಠಾನಗೊಳ್ಳುವುದು ನಿಶ್ಚಿತ ಎಂದು ತಿಳಿಸಿದರು.

ನೊಣವಿನಕೆರೆಯಿಂದ ನೀರು ತರುವ ಈ ಯೋಜನೆಯಿಂದ ಆ ಮಾರ್ಗದ ಹಳ್ಳಿಗಳಿಗೂ ಅನುಕೂಲ ಕಲ್ಪಿಸಲಾಗುತ್ತದೆ. ನೊಣವಿನಕೆರೆಗೂ ನೀರಿನ ವಿಶೇಷ ಯೋಜನೆ ರೂಪಿಸಲಾಗಿದೆ. ಕೃಷಿಗೆ ಯಾವುದೇ ತೊಂದರೆಯಾಗದಂತೆ ಆ ಕೆರೆಗೆ ಹೆಚ್ಚು ನೀರು ಹರಿಸಿಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಹಾಗಾಗಿ ಆ ಭಾಗದ ರೈತರು ಆತಂಕ ಪಡಬೇಕಿಲ್ಲ. ಈಚನೂರು ಕೆರೆ ಜತೆಗೆ ನೊಣವಿನಕೆರೆ ಕೆರೆ ನೀರನ್ನು ಅಗತ್ಯ ಸಂದರ್ಭದಲ್ಲಿ ಬಳಸಲಾಗುತ್ತದೆ ಎಂದರು.

ಯುಜಿಡಿಗೆ ಸಂಬಂಧಿಸಿದ ಶೌಚ ಸಂಸ್ಕರಣ ಘಟಕವನ್ನು ಕೊನೇಹಳ್ಳಿ ಕಾವಲಿನಲ್ಲಿ ಸ್ಥಾಪಿಸಿ ಶುದ್ಧೀಕರಿಸಿದ ನೀರನ್ನು ಕೃಷಿಗೆ ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗಿದೆ. ಅನುಮಾನ ಬಗೆಹರಿಸಿ ಅನುಮತಿ ಪಡೆಯಲು ಸಚಿವರ ಜತೆ ಸಭೆ ನಡೆಯಲಿದೆ. ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೂ ಬೇರೆಲ್ಲೂ ಸೂಕ್ತ ಜಾಗ ಸಿಗದಿದ್ದರಿಂದ ಕೊನೇಹಳ್ಳಿ ಪಶು ಸಂಶೋಧನಾ ಕೇಂದ್ರಕ್ಕೆ ಸೇರಿದ ನೂರು ಎಕರೆ ಜಾಗ ಪಡೆಯಲು ನಿರ್ಧರಿಸಲಾಗಿದೆ.

ಆ ಇಲಾಖೆ ಸಚಿವರು ಸಹಕರಿಸುವುದಾಗಿ ತಿಳಿಸಿದ್ದಾರೆ. ನೇಕಾರರ ಅನುಕೂಲಕ್ಕಾಗಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲು ಕೂಡ ಆಲೋಚನೆ ಇದೆ. ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಜಾಗ ಪಡೆಯಲು ಪ್ರಯತ್ನ ನಡೆದಿದೆ ಎಂದರು.

ನಗರದ ಕೆಲ ರಸ್ತೆಗಳ ವಿಸ್ತರಣೆ ಪ್ರಸ್ತಾಪಕ್ಕೆ ನಾಗರಿಕರಿಂದ ಬೆಂಬಲ ವ್ಯಕ್ತವಾಗಿದೆ. ನಗರ ಅಭಿವೃದ್ಧಿ ಯೋಜನೆ ನಿಯಮದಂತೆ ಸ್ಥಳದ ಅವಶ್ಯಕತೆ ಅನುಸರಿಸಿ ಹಂತಹಂತವಾಗಿ ರಸ್ತೆಗಳನ್ನು ವಿಸ್ತರಿಸಲಾಗುತ್ತದೆ. ವಿಸ್ತರಣೆ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ.

ಪ್ರಥಮ ಹಂತದಲ್ಲಿ ದೊಡ್ಡಪೇಟೆ ರಸ್ತೆ ವಿಸ್ತರಣೆ ಕೈಗೆತ್ತಿಕೊಳ್ಳಬೇಕಾಗಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.