ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ಮುಜುಗರ ತರದಂತೆ ತಾಕೀತು

Last Updated 24 ಏಪ್ರಿಲ್ 2017, 7:06 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರ ನಡು ವಿನ ಬಣ ರಾಜಕೀಯಕ್ಕೆ ಕಡಿವಾಣ ಹಾಕಲು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮುಂದಾಗಿದ್ದಾರೆ.

ಶನಿವಾರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರ ಸಭೆ ನಡೆಸಿರುವ ಅವರು, ಪಕ್ಷಕ್ಕೆ ಮುಜುಗರ ತರುವ ರೀತಿ ನಡೆದು ಕೊಳ್ಳದಂತೆ ಎಲ್ಲರಿಗೂ ತಾಕೀತು ಮಾಡಿದ್ದಾರೆ.

ಕವಿತಾ ಸನಿಲ್‌ ಅವರು ಪಾಲಿಕೆಯ ಮೇಯರ್‌ ಗಾದಿಗೇರಿದ ಬಳಿಕ ಕಾಂಗ್ರೆ ಸ್‌ನ ಪಾಲಿಕೆ ಸದಸ್ಯರಲ್ಲಿ ಬಣ ರಾಜ ಕೀಯ ಬಿರುಸಾಗಿದೆ. ಮಾರ್ಚ್‌ 30 ರಂದು ನಡೆದ ಪಾಲಿಕೆ ಪರಿಷತ್ತಿನ ಸಭೆ ಯಲ್ಲಿ ಕಾಂಗ್ರೆಸ್‌ನ ಸದಸ್ಯರೇ ಮೇಯರ್‌ ವಿರುದ್ಧ ಧರಣಿ ನಡೆಸಿದ್ದು, ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಬೆಳವಣಿಗೆ ಮರುಕಳಿಸದಂತೆ ತಡೆಯಲು ಮುಂದಾ ಗಿರುವ ಸಚಿವರು, ಶಾಸಕರಾದ ಜೆ.ಆರ್‌. ಲೋಬೊ, ಬಿ.ಎ.ಮೊಯಿದ್ದೀನ್ ಬಾವಾ ಉಪಸ್ಥಿತಿಯಲ್ಲಿ ಪಾಲಿಕೆಯ ಸದ ಸ್ಯರ ಸಭೆ ನಡೆಸಿ, ಒಮ್ಮತ ಮೂಡಿ ಸಲು ಯತ್ನಿಸಿ ದ್ದಾರೆ. ಒಂದು ಹಂತದಲ್ಲಿ ಕೆಲವು ಸದಸ್ಯರ ಬಗ್ಗೆ ಸಿಟ್ಟಾದ ಸಚಿವರು, ತುಸು ಏರುದನಿ ಯಲ್ಲಿ ಗದರಿದ್ದಾರೆ.

ನಗರದ ಸರ್ಕಿಟ್‌ ಹೌಸ್‌ನಲ್ಲಿ ಶನಿ ವಾರ ಬೆಳಿಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಈ ಸಭೆ ನಡೆದಿದೆ. ನಾಮನಿರ್ದೇ ಶಿತರೂ ಸೇರಿದಂತೆ 31 ಮಂದಿ ಪಾಲಿಕೆ ಸದಸ್ಯರು ಸಭೆಯಲ್ಲಿದ್ದರು. ಕವಿತಾ ಸನಿಲ್‌, ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಬ್ದುಲ್ ರವೂಫ್, ನಾಗವೇಣಿ, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಇಬ್ರಾ ಹಿಂ ಕೋಡಿಜಾಲ್, ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ವಿಶ್ವಾಸ್‌ಕುಮಾರ್‌ ದಾಸ್‌ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು. ಆದರೆ, ಭಿನ್ನಮತೀಯರ ಬಣದಲ್ಲಿ ಗುರುತಿಸಿಕೊಂಡಿರುವ ಪಾಲಿಕೆಯ ಹಿರಿಯ ಸದಸ್ಯರಾದ ಭಾಸ್ಕರ ಮೊಯಿಲಿ, ಲ್ಯಾನ್ಸ್‌ಲೋಟ್ ಪಿಂಟೋ, ಮೊಹ ಮ್ಮದ್ ಮತ್ತು ಡಿ.ಕೆ.ಅಶೋಕ್‌ಕುಮಾರ್‌ ಸಭೆಗೆ ಗೈರಾಗಿದ್ದರು.

ಲೋಬೊ ಅಸಮಾಧಾನ: ಮಾ.30 ರಂದು ನಡೆದ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರೇ ಮೇಯರ್ ವಿರುದ್ಧ ಪ್ರತಿಭಟನೆ ನಡೆಸಿರುವುದಕ್ಕೆ ಶಾಸಕ ಲೋಬೋ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಲಿ ಕೆಯ ಕೆಲವು ಸದಸ್ಯರ ವರ್ತನೆಯಿಂದ ಕಾಂಗ್ರೆಸ್‌ ಪಕ್ಷದ ವರ್ಚಸ್ಸಿಗೆ ಹಾನಿಯಾ ಗಿದೆ ಎಂದು ದೂರಿದ್ದಾರೆ. ಮತ್ತೆ ಈ ರೀತಿಯ ಘಟನೆಗಳು ನಡೆದರೆ ಪಾಲಿಕೆಯ ಸಭೆಯಿಂದ ದೂರ ಉಳಿಯುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಮಾತಿಗೆ ಶಾಸಕ ಮೊಯಿದ್ದೀನ್ ಬಾವಾ ಕೂಡ ಬೆಂಬಲ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಆ ಸಭೆಯಲ್ಲಿ ನಮ್ಮ ಪಕ್ಷದ ಸದಸ್ಯರೇ ಮೇಯರ್ ವಿರುದ್ಧ ಪ್ರತಿಭಟ ನೆಗೆ ಇಳಿದರು. ನಮ್ಮ ಮಾತಿಗೂ ಬೆಲೆ ಕೊಡಲಿಲ್ಲ. ಆ ದಿನದ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಆಡಳಿತ ಪಕ್ಷದಲ್ಲಿರುವ ನಾವು ಪಾಲಿಕೆಯ ಪರಿಷತ್ತಿನೊಳಗೆ ತಲೆತಗ್ಗಿಸಬೇಕಾದ ಮುಜುಗರದ ಸನ್ನಿವೇಶನ ನಿರ್ಮಾಣವಾಯಿತು. ಇನ್ನೆಂದೂ ಪಾಲಿಕೆ ಸಭೆಗೆ ಹೋಗಲೇ ಬಾರದು ಎಂದು ನನಗೆ ಅನ್ನಿಸಿದೆ’ ಎಂಬುದಾಗಿ ಲೋಬೊ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಸಭೆ ಯಲ್ಲಿದ್ದ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಸ್ತುಕ್ರಮದ ಎಚ್ಚರಿಕೆ: ಪಾಲಿಕೆ ಯಲ್ಲಿ ಮತ್ತೆ ಬಣ ರಾಜಕೀಯ ನಡೆಸ ದಂತೆ ಸಚಿವ ರೈ ಎಲ್ಲ ಸದಸ್ಯರಿಗೂ ತಾಕೀತು ಮಾಡಿದ್ದಾರೆ. ಪಾಲಿಕೆಯ ಒಳಗೆ ಅಥವಾ ಹೊರಗೆ ಪಕ್ಷಕ್ಕೆ ಮುಜು ಗರ ಆಗುವ ರೀತಿಯಲ್ಲಿ ಯಾವುದೇ ಸದಸ್ಯರು ವರ್ತಿಸಿದರೆ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಸಮಾಧಾನಗಳಿದ್ದಲ್ಲಿ ನೇರವಾಗಿ ಪಕ್ಷದ ಹಿರಿಯರ ಗಮನಕ್ಕೆ ತಂದು, ಪರಿಹರಿಸಿಕೊಳ್ಳುವಂತೆ ಸೂಚಿಸಿ ದ್ದಾರೆ ಎಂದು ಗೊತ್ತಾಗಿದೆ.

‘ಎಲ್ಲ ಸದಸ್ಯರೂ ಕಡ್ಡಾಯವಾಗಿ ಪಾಲಿಕೆಯ ಪರಿಷತ್ತಿನ ಸಭೆಯ ಪೂರ್ವ ಭಾವಿ ಸಭೆಗೆ ಹಾಜರಾಗಬೇಕು. ಸಭೆಯ ಮುಂದಿರುವ ವಿಚಾರಗಳ ಕುರಿತು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸ ಬೇಕು. ಯಾವುದೇ ಆಕ್ಷೇಪಗಳಿದ್ದರೆ ಪೂರ್ವಭಾವಿ ಸಭೆಯಲ್ಲೇ ಗಮನಕ್ಕೆ ತರಬೇಕು. ಮೇಯರ್‌, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಪಕ್ಷದ ಸಚೇತಕರು ಈ ಬಗ್ಗೆ ಚರ್ಚಿಸಿ ಪರಿಹರಿಸಬೇಕು. ಯಾವುದೇ ಸದಸ್ಯರಿಗೆ ಪಾಲಿಕೆ ಆಡಳಿತದ ಕುರಿತು ಅಸಮಾಧಾನಗಳಿದ್ದರೆ ಶಾಸಕರ ಜೊತೆ ನೇರವಾಗಿ ಹೇಳಿಕೊಳ್ಳಿ’ ಎಂಬುದಾಗಿ ರೈ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT