ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ‘ಇಗ್ನೈಟ್’ ಆಗಲಿ...

ನಮ್‌ ಕ್ಯಾಂಪಸ್‌
Last Updated 25 ಸೆಪ್ಟೆಂಬರ್ 2014, 6:09 IST
ಅಕ್ಷರ ಗಾತ್ರ

ನೀವೇನಾದರೂ ಯಂತ್ರ, ಉಪಕರಣ ಆವಿಷ್ಕಾರ ಮಾಡಿದ್ದೀರಾ? ನಿಮ್ಮ ಹತ್ತಿರ ಅದ್ಭುತ ಎನಿಸುವ ಐಡಿಯಾ ಇದ್ದು, ಅದರಿಂದ ಸಮಾಜಕ್ಕೆ ಪ್ರಯೋಜನ ಆಗು­ತ್ತದೆ ಎಂಬ ನಂಬಿಕೆ ಇದೆಯಾ? ವಿದ್ಯಾರ್ಥಿ ಎಂಬ ಕಾರಣಕ್ಕೆ ಹೇಳಲಿಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗಿದೆಯಾ? ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂಬ ಕೋಪ ಇದೆಯಾ? ನಿಮ್ಮಂಥ ವಿದ್ಯಾರ್ಥಿಗಳಿಗಾಗಿಯೇ ರಾಷ್ಟ್ರೀಯಮಟ್ಟದ ವೇದಿಕೆಯೊಂದು ಇದೆ.

ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಸಮರ್ಥ­ವಾದ ಯಂತ್ರವನ್ನೋ ಉಪಕರಣವನ್ನೋ ಆವಿಷ್ಕರಿಸಿದರೆ ನ್ಯಾಷನಲ್‌ ಇನ್ನೋವೇಷನ್‌ ಫೌಂಡೇಷನ್‌ ಅದನ್ನು ಗುರುತಿಸಿ, ಗೌರವಿಸುವುದರ ಜತೆ ಧನಸಹಾಯ ಕೂಡಾ ನೀಡುತ್ತದೆ. ಇದು ಅಹಮದಾಬಾದ್‌ನಲ್ಲಿರುವ ಫೌಂಡೇಷನ್‌, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆ. ಇಲ್ಲಿಂದ ಕೇವಲ ಶ್ರೀಮಂತ, ಆಂಗ್ಲ ಮಾಧ್ಯಮ ಶಾಲೆ ಮಕ್ಕಳಷ್ಟೇ ಅಲ್ಲ ಬಡ ಗ್ರಾಮೀಣ, ಮಧ್ಯಮ ವರ್ಗದ ಸರ್ಕಾರಿ ಶಾಲೆ ಮಕ್ಕಳು ‘ಇಗ್ನೈಟ್‌’ ಎಂಬ ಸ್ಪರ್ಧೆಯಡಿ ಆವಿಷ್ಕಾರ ಮಾಡಿ ಇಲ್ಲಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ.

ಇಗ್ನೈಟ್:  ಇದು ಶಾಲಾ ಮಕ್ಕಳಲ್ಲಿ ಆವಿಷ್ಕಾರ ಮನೋ­ಭಾವ ಬೆಳೆಸಲು ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಇಲ್ಲಿ ಮೂಲ ಸೃಜನಶೀಲ ಐಡಿಯಾಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ಪ್ರತಿಭೆಗೆ ಪೋಷಣೆ: ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ಪೋಷಿಸಿ ಬೆಳೆಸಿದರೆ ಬೆಳಕಿಗೆ ಬರುತ್ತದೆ ಎನ್ನುವುದು ಫೌಂಡೇಷನ್‌ ನಂಬಿಕೆ. ಮಕ್ಕಳು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಹೊರತಾಗಿಯೂ ಅವರಲ್ಲಿ ಉತ್ತಮ ನಡವಳಿಕೆ ಹಾಗೂ ಸ್ಪರ್ಧಾ ಮನೋಭಾವ ಬೆಳೆಸುವುದು ಪ್ರತಿಷ್ಠಾನದ ಗುರಿ.

ಕೆಲ ಆವಿಷ್ಕಾರಗಳು: ಪೈಪ್‌ ತೊಳೆಯುವ ಸಾಧನ, ನೀರು ಇಂಗಿಸುವ ಕೊಡೆಗೆ ಫಿಲ್ಟರ್‌ ಅಳವಡಿಸುವುದು, ಹೆಲ್ಮೆಟ್‌ ಧರಿಸಿದರೆ ಮಾತ್ರ ಸ್ಟಾರ್ಟ್‌ ಆಗುವ ಬೈಕ್‌... ವಾರೆ ವ್ಹಾ! ಎನಿಸುವ ಹಲವು ಐಡಿಯಾಗಳು ಈಗಾಗಲೇ ಸಲ್ಲಿಕೆಯಾಗಿವೆ. 

ನಿಮಗೂ ಛಾನ್ಸ್‌ ಇದೆ: ದ್ವಿತೀಯ ಪಿಯುಸಿವರೆಗಿನ ಅಥವಾ ಕೇಂದ್ರೀಯ ಪಠ್ಯಕ್ರಮದ ೧೨ನೇ ತರಗತಿವರೆಗಿನ (೧೭ರಿಂದ ೧೮ ವರ್ಷದವರೆಗೆ) ವಿದ್ಯಾರ್ಥಿಗಳು ಯೋಜನೆಯ ವಿವರ ವಿಸ್ತೃತವಾಗಿ ಬರೆದು ಮೇಲ್‌ ಮಾಡಬಹುದು. ಕಲಾ, ವಾಣಿಜ್ಯ, ವಿಜ್ಞಾನ ಎಲ್ಲ ವಿಭಾಗದವರೂ ಪಾಲ್ಗೊಳ್ಳಬಹುದು.

ಮಾಹಿತಿಗೆ
   ವೆಬ್‌ಸೈಟ್: www.nif.org.in/ignite
ಮೇಲ್‌: ignite@nifindia.org 
ದೂರವಾಣಿ: 91-79-26732456 / 2095
ಉಚಿತ ಕರೆ: 1800 233 5555

ಮಿತಿ ಇಲ್ಲ: ಒಬ್ಬ ವಿದ್ಯಾರ್ಥಿ ಎಷ್ಟಾದರೂ ಆವಿಷ್ಕಾರದ ವಿವರಗಳನ್ನು ಹಾಕಬಹುದು. ತಂಡವಾಗಿ ಅಥವಾ ವೈಯಕ್ತಿಕವಾಗಿಯೂ ಭಾಗವಹಿಸಬಹುದು. ಆದರೆ ಶಿಕ್ಷಕರು, ಪೋಷಕರ ನೆರವು ಪಡೆಯಬಾರದು.

ಪ್ರಶಸ್ತಿ ಘೋಷಣೆ:  ೨೦೧೫ರ ಅಕ್ಟೋಬರ್‌ ೧೫ರಂದು ಪ್ರಶಸ್ತಿ ಘೋಷಿಸಲಾಗುತ್ತದೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಪ್ರಶಸ್ತಿ ಪ್ರದಾನ ಮಾಡು­ತ್ತಾರೆ. ಕಳುಹಿಸಿದ ಮಾದರಿಗಳನ್ನು ಪರಿಶೀಲಿಸಿ ಪ್ರಶಸ್ತಿಗಳ ಸಂಖ್ಯೆ ನೀಡುವ ಬಗ್ಗೆ ತೀರ್ಮಾನವಾಗುತ್ತದೆ. ಆಯ್ಕೆ­ಯಾದ ಮಾದರಿ ಪ್ರದರ್ಶನ ಸಹ ಹಮ್ಮಿಕೊಳ್ಳ­ಲಾಗು­ತ್ತದೆ. ಅರ್ಜಿ ಸಲ್ಲಿಸಲು ೨೦೧೫,ಆಗಸ್ಟ್ ೩೧ ಕೊನೆ ದಿನ.

ಇದು ಬೇಡ: ಹಳಸಲು ವಿಚಾರಗಳಿಗೆ ಯಾವುದೇ ಪ್ರಾತಿನಿಧ್ಯ ಇಲ್ಲಿಲ್ಲ. ಜಾಗತಿಕ ತಾಪಮಾನ, ಜನಸಂಖ್ಯೆ ಹೆಚ್ಚಳದಂತ ಸಮಸ್ಯೆಗಳಿಗೆ ಪರಿಹಾರ ಕುರಿತು ಪ್ರಬಂಧ ಕಳುಹಿಸಿದರೆ ತಿರಸ್ಕೃತವಾಗುತ್ತವೆ. ನೈಸರ್ಗಿಕ ಸಂಪನ್ಮೂಲ­ಗಳ ಮರು ಬಳಕೆ, ಸೌರಶಕ್ತಿ ಕುರಿತಾದ ನವೀನ ವಿಚಾರಗಳು ಇಲ್ಲಿ ಸ್ಥಾನ ಪಡೆಯುತ್ತವೆ.

ಏನು ಲಾಭ: ಆರ್ಥಿಕ ಸಹಾಯದ ಜತೆಗೆ ಹಿರಿಯ ಮಾರ್ಗದರ್ಶಕರೊಬ್ಬರ ಸಹಾಯವನ್ನು ನೀಡಲಾ­-ಗುತ್ತದೆ. ಆವಿಷ್ಕಾರ ವಸ್ತು ಅತ್ಯುಪಯುಕ್ತ ಅನಿಸಿದರೆ ಪೇಟೆಂಟ್‌ ನೀಡಿ ಸಾಕಷ್ಟು ಹಣ ಸಹ ಸಿಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT