221 ಬೀದಿ ನಾಯಿಗಳ ದತ್ತು; ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಅಭಿಯಾನ

ಉಡುಪಿ: ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್) ಇಂಡಿಯನ್ ಡೆಂಟಲ್ ಅಸೋಸಿಯೇಶನ್ನ ಉಡುಪಿ ಶಾಖೆಯ ಸಹಯೋಗದಲ್ಲಿ ಭಾನುವಾರ ಮಲ್ಪೆ ಬೀಚ್ನಲ್ಲಿ ಬೀದಿನಾಯಿ ಮರಿಗಳ ದತ್ತು ನೀಡುವ ಕಾರ್ಯಕ್ರಮವನ್ನು ಆಯೋಜಿಸಿತು.
‘ನಮ್ಮ ಸ್ವಂತ ನಮ್ಮ ಹೆಮ್ಮೆ’ ಎಂಬ ಅಭಿಯಾನದ ಮೂಲಕ ಬೀದಿ ನಾಯಿಮರಿಗಳ ದತ್ತು ನೀಡುವ ಕಾರ್ಯಕ್ರಮವನ್ನು ನಡೆಸಿ, ಸುಮಾರು 14 ಮರಿಗಳನ್ನು ಆಸಕ್ತರಿಗೆ ದತ್ತು ನೀಡಲಾಯಿತು. ಈ ನಾಯಿಮರಿಗಳಿಗೆ ಚುಚ್ಚುಮದ್ದು, ಲಸಿಕೆಗಳನ್ನು ಮುಂಚಿತವಾಗಿ ನೀಡಲಾಗಿತ್ತು. ಇದರೊಂದಿಗೆ ಈ ಟ್ರಸ್ಟ್ ಮೂಲಕ ಕಳೆದ 10 ತಿಂಗಳಲ್ಲಿ 221 ಬೀದಿ ನಾಯಿ ಮರಿಗಳನ್ನು ದತ್ತು ನೀಡಲಾಗಿದೆ ಎಂದು ಸಂಸ್ಥೆಯ ಸ್ಥಾಪಕಿ ಬಬಿತಾ ಮಧ್ವರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಬೀದಿ ನಾಯಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಕ್ಕು ಎಂಬ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಬೀದಿ ನಾಯಿಗಳ ಕಷ್ಟ, ಅನುಭವಿಸುವ ನೋವು, ಆತಂಕ, ಅಸುರಕ್ಷತೆಗಳನ್ನು ನಾಟಕದಲ್ಲಿ ಬಿಂಬಿಸಲಾಗಿದ್ದು, ಇದು ಜನರ ಗಮನ ಸೆಳೆಯಿತು. ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಉಡುಪಿ ಶಾಖೆಯ ಅಧ್ಯಕ್ಷ ಡಾ. ಮನೋಜ್ ಮ್ಯಾಕ್ಸಿಂ ಸ್ವಾಗತಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.