ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತನೇ ಬೆಳೆಗೆ ದರ ನಿಗದಿಪಡಿಸುವಂತಾಗಲಿ: ಅನಂತ ಪದ್ಮನಾಭ ಐತಾಳ

Published 31 ಆಗಸ್ಟ್ 2024, 13:42 IST
Last Updated 31 ಆಗಸ್ಟ್ 2024, 13:42 IST
ಅಕ್ಷರ ಗಾತ್ರ

ಬ್ರಹ್ಮಾವರ: ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನುಗ್ಗಿದಲ್ಲಿ ಕೃಷಿ ಅವಲಂಬಿತ ಭಾರತ ಸದೃಢವಾಗಲು ಸಾಧ್ಯ ಎಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಟ್ರಸ್ಟಿ ಕೆ. ಅನಂತ ಪದ್ಮನಾಭ ಐತಾಳ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಗೀತಾನಂದ ಫೌಂಡೇಷನ್, ರೈತಧ್ವನಿ ಸಂಘ, ಕಾರ್ಕಡ ಗೆಳೆಯರ ಬಳಗ, ಸಾಲಿಗ್ರಾಮ ವಿಪ್ರ ಮಹಿಳಾ ಬಳಗದ ಸಹಯೋಗದೊಂದಿಗೆ ಈಚೆಗೆ ನಡೆದ ಸಾಧಕ ರೈತರನ್ನು ಗುರುತಿಸುವ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ  ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೃಷಿಗಾಗಿ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆಯುತ್ತಿದ್ದು, ಇದ್ಯಾವುದೂ ಸರ್ಕಾರದ ಕದ ತಟ್ಟುತ್ತಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ಎಂದರೆ ರೈತನೇ ಅವನು ಬೆಳೆದ ಬೆಳೆಗೆ ದರ ನಿಗದಿ ಪಡಿಸುವಂತೆ ಆಗಬೇಕು ಎಂದರು.

ಕೋಟ ಕಾಸನಗುಂದು ಪರಿಸರದ ಕೃಷಿಕ ಸುಧಾಕರ ಶೆಟ್ಟಿ ಅವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಸದಾನಂದ ಪೂಜಾರಿ ಗಿಳಿಯಾರು, ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಕೃಷಿಕ ಭಾಸ್ಕರ ಶೆಟ್ಟಿ, ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ವನಿತಾ ಶ್ರೀಧರ ಆಚಾರ್, ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ ಮುಡೋಳಿ, ಕೇಶವ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ ಇದ್ದರು.

ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ.ಬಾಯರಿ ನಿರೂಪಿಸಿದರು. ಸದಸ್ಯ ಶಶಿಧರ ತಿಂಗಳಾಯ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT