ಹೋರಾಟಕ್ಕೆ ಸಜ್ಜಾಗುತ್ತಿದ್ದಂತೆ ಇಲ್ಲಿಯ ಮಹೇಶ್ ಆಸ್ಪತ್ರೆಯ ಬಳಿ ಹೆದ್ದಾರಿಯ ಎರಡು ಬದಿ ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಸಮತಟ್ಟು ಮಾಡಿ ಹೆದ್ದಾರಿ ದಾಟುವವವರಿಗೆ ಝೀಬ್ರಾ ಕ್ರಾಸಿಂಗ್ ಮಾಡಿರುವುದು.
ಮೇಲ್ಸೇತುವೆ ನಿರ್ಮಾಣ ಒಂದೇ ಶಾಶ್ವತ ಪರಿಹಾರ ಏ. 8ರಂದು ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಸಭೆ
ಕೋಟ ಹೈಸ್ಕೂಲ್ ಬಳಿ ಮೇಲ್ಸೇತುವೆ ನಿರ್ಮಿಸಬೇಕು. ತೆಕ್ಕಟೆಯಿಂದ ಮಣೂರು ಕೋಟ ಸಾಲಿಗ್ರಾಮದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ
ಶ್ಯಾಮ ಸುಂದರ ನಾಯರಿ ಕೋಟ ನಿವಾಸಿ
‘ಸಮಸ್ಯೆ ಪರಿಹರಿಸದಿದ್ದರೆ ಹೋರಾಟ’
ಬ್ರಹ್ಮಾವರದ ರಸ್ತೆ ಸಮಸ್ಯೆಗಳ ಬಗ್ಗೆ ಇದೇ 8ರಂದು ನಡೆಯುವ ಸಭೆಯಲ್ಲಿ ಜನರಿಗೆ ಅನುಕೂಲವಾಗುವ ಯಾವುದೇ ನಿರ್ಣಯ ಕೈಗೊಳ್ಳದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು. ಇದೇ 12ರಂದು ಅಥವಾ ಮೂರ್ನಾಲ್ಕು ದಿನದಲ್ಲಿ ಬ್ರಹ್ಮಾವರ ಬಂದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡು ಮೇಲ್ಸೇತುವೆ ನಿರ್ಮಾಣಕ್ಕೆ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರ ಅಲ್ವಿನ್ ಅಂದ್ರಾದೆ ತಿಳಿಸಿದ್ದಾರೆ.