ಶುಕ್ರವಾರ, ಫೆಬ್ರವರಿ 3, 2023
18 °C

ಯಕ್ಷಗಾನ ವಸತಿ ಶಾಲೆಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಯಕ್ಷಗಾನ ಚಿಂತಕ ದಿ.ಐರೋಡಿ ಸದಾನಂದ ಹೆಬ್ಬಾರರು ಸ್ಥಾಪಿಸಿದ, ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರವು ಭಾಗವತಿಗೆ, ಮದ್ದಲೆ, ನೃತ್ಯ, ಚಂಡೆ ತರಬೇತಿ ಪ್ರಾರಂಭಿಸಲಿದೆ.

ಉಚಿತ ಊಟ, ಉಪಾಹಾರ, ವಸತಿ ಸೌಲಭ್ಯವಿದ್ದು ಉತ್ತೀರ್ಣರಾದವರಿಗೆ ಆಯ್ದ ಮೇಳಗಳಲ್ಲಿ ಉದ್ಯೋಗದ ವ್ಯವಸ್ಥೆ ಮಾಡಲಾಗುವುದು. ಗುರುಕುಲ ಪದ್ದತಿಯಂತೆ ನಡೆಸಲುದ್ದೇಶಿಸುವ ಯಕ್ಷಗಾನದ ಶಿಕ್ಷಣಕ್ಕಾಗಿ ಸೇರಬಯಸುವವರು ಈ ತಿಂಗಳ 20ರ ಒಳಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಅಂಚೆ ಐರೋಡಿ 576226, ಉಡುಪಿ ಜಿಲ್ಲೆ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುಂಡ್ಮಿ
ಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪಕ್ಕೆ ನೇರವಾಗಿ ಬಂದು ಅರ್ಜಿ ಕೊಡಬಹುದು. ಮಾಹಿತಿಗೆ 9880605610 ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.