ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ದೇಶದ ಜನರ ಜೀವನಾಡಿ: ಸರಸ್ವತಿ ಜಿ. ಪುತ್ರನ್

ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ
Last Updated 27 ಸೆಪ್ಟೆಂಬರ್ 2022, 4:36 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಕೃಷಿ ಮತ್ತು ಹೈನುಗಾರಿಕೆ ಈ ದೇಶದ ಜನರ ಜೀವನಾಡಿಯಾಗಿದೆ. ಇದರಿಂದ ಅದೆಷ್ಟೊ ಕುಟುಂಬಗಳು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ‘ಕ್ಲೀನ್‌ ಕುಂದಾಪುರ’ದ ಸಂಯೋಜಕಿ ಸರಸ್ವತಿ ಜಿ. ಪುತ್ರನ್ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ರೈತಧ್ವನಿ ಸಂಘ, ಸಾಲಿಗ್ರಾಮದ ವಿಪ್ರ ಮಹಿಳಾ ಬಳಗ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್, ಮಣೂರು ಗೀತಾನಂದ ಫೌಂಡೇಶನ್, ಕಾರ್ಕಡ ಗೆಳೆಯರ ಬಳಗದ ಸಹಯೋಗದಲ್ಲಿ ಭಾನುವಾರ ನಡೆದ 19ನೇ ಆವೃತ್ತಿಯ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಆಸ್ತಿ ಕೃಷಿಕರು ಅನ್ನುವ ನಾವುಗಳು ಅವರ ಹಿತ ಕಾಯಲು ಬದ್ಧರಾಗಿದ್ದೇವಾ ಎಂದು ವಿಮರ್ಶಿಸಿಕೊಳ್ಳಬೇಕು. ಇಂದು ರೈತನ ಸಮಸ್ಯೆ ಆಲಿಸುವರಿಲ್ಲದಾಗಿದೆ. ಸರ್ಕಾರ ಬರೇ ಘೋಷಣೆಗಳಲ್ಲೆ ಕಾಲಹರಣ ಮಾಡುತ್ತಿವೆ. ರೈತನಿಗೆ ಬೇಕಾಗುವ ನೈಜ ಸಹಕಾರ ಕಡೆಗಣಿಸುತ್ತಿದೆ ಎಂದರು.

ಹೈನುಗಾರಿಕೆ ಮತ್ತು ಕೃಷಿ ಕೇತ್ರದಲ್ಲಿ ಸಾಧನೆ ಮಾಡಿದ ಕದ್ರಿಕಟ್ಟು ಶಾರದ ರಾಮಚಂದ್ರ ಆಚಾರ್ಯ ಅವರನ್ನು ಗೌರವಿಸಲಾಯಿತು.

ಕೋಟ ಶ್ರೀದೇವಿ ಜುವೆಲರ್ಸ್ ಮಾಲೀಕ ಸೀತಾರಾಮ ಆಚಾರ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕೋಟ ಜನತಾ ಫಿಶ್ ಮಿಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮದ ಸಂಚಾಲಕಿ ವನಿತಾ ಉಪಾಧ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್, ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಹಂದಟ್ಟು ಮಹಿಳಾ ಬಳಗದ ಕೋಶಾಧಿಕಾರಿ ಶಕೀಲ ಪೂಜಾರಿ ಇದ್ದರು.

ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

ಸುಜಾತ ಬಾಯರಿ ನಿರೂಪಿಸಿದರು. ಕೇಂದ್ರದ ಕೃಷಿ ಯೋಜನೆಯ ಬಗ್ಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT