ಶನಿವಾರ, ಜೂನ್ 25, 2022
27 °C

ಬೈಂದೂರು: ಹಸಿದವರಿಗೆ ಅನ್ನ ನೀಡುವ ಸಾಯಿನಾಥ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಕುಂದಾಪುರದಲ್ಲಿ ಚಿನ್ನ, ಬೆಳ್ಳಿ ಒಡವೆ ಸಿದ್ಧಪಡಿಸಿ ಮಾರುವ ಸಾಯಿನಾಥ ಶೇಟ್ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿರ್ಗತಿಕರು, ಕಡು ಬಡವರು, ಭಿಕ್ಷುಕರು ಮತ್ತು ಅಶಕ್ತರಿಗೆ ಉಚಿತ ಊಟ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಈ ಅನ್ನದಾಸೋಹ ಶನಿವಾರ 41 ದಿನ ಪೂರೈಸಿದೆ. ಯಾವುದೇ ಪ್ರಚಾರ ಬಯಸದೆ ಅವರು ಇದನ್ನು ಮಾಡುತ್ತಿದ್ದಾರೆ.

ಪ್ರತಿದಿನ 150 ಕ್ಕೂ ಅಧಿಕ ಊಟದ ಪೊಟ್ಟಣಗಳನ್ನು ಸ್ಕೂಟರ್‌ನಲ್ಲಿ ಹಾಕಿಕೊಂಡು ರಸ್ತೆ ಬದಿಯಲ್ಲಿ ಹಸಿದವರಿಗೆ ವಿತರಿಸುತ್ತಾರೆ.

ಶನಿವಾರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಬಯಲಿನ ಗುಡಿಸಿಲಿನಲ್ಲಿ ದಿನ ಕಳೆಯುತ್ತಿರುವ ಅಲೆಮಾರಿಗಳಿಗೆ ಊಟದ ಪ್ಯಾಕೆಟ್‌ ವಿತರಿಸಿದರು.

’ನಾನು ದುಡಿಮೆಯಿಂದ ಜೀವನ ನಡೆಸುವ ಸಾಮಾನ್ಯ ವ್ಯಕ್ತಿ, ಹಸಿವೆ ಸಂಕಟದ ಅನುಭವ ಇದೆ. ಆದ್ದರಿಂದ ಲಾಕ್‌ಡೌನ್ ಸಂದರ್ಭ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಹಲವರ ಸಹಕಾರದಿಂದ ಮತ್ತು ನನ್ನ ದುಡಿಮೆಯಿಂದ ಕೈಲಾದಷ್ಟು
ಸಹಾಯ ಮಾಡುತ್ತಿದ್ದೇನೆ. ಪ್ರತಿ ದಿನ 150 ಅಶಕ್ತರಿಗೆ ಊಟ ವಿತರಿಸುತ್ತಿದ್ದೇನೆ. ಹಿಂದಿನ ಲಾಕ್‌ಡೌನ್ ಅವಧಿಯಲ್ಲೂ ಆಹಾರದ ಪೊಟ್ಟಣ ವಿತರಿಸಿದ್ದೇನೆ’ ಎಂದು ಸಾಯಿನಾಥ ಶೇಟ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು