ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಆಲ್ಫ್ರೆಡ್ ರೋಚ್ ಪುನೀತ ಪದವಿಯತ್ತ

ಡಿ.27ರಂದು ಬ್ರಹ್ಮಾವರದ ಕುಟುಂಬ ದೇವಾಲಯದಲ್ಲಿ ಪ್ರಕ್ರಿಯೆ ಆರಂಭ
Last Updated 24 ಡಿಸೆಂಬರ್ 2021, 13:48 IST
ಅಕ್ಷರ ಗಾತ್ರ

ಉಡುಪಿ: ಕಪುಚಿನ್ ಸಭೆಯ ಧರ್ಮಗುರು ಆಲ್ಫ್ರೆಡ್ ರೋಚ್ ಅವರನ್ನು ಪುನೀತ ಪದವಿಗೇರಿಸಲಾಗುತ್ತಿದ್ದು, ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪ್ರಕ್ರಿಯೆಯು ಡಿ.27ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರದ ಪವಿತ್ರ ಕುಟುಂಬ ದೇವಾಲಯದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ ಅವರ ನೇತೃತ್ವದಲ್ಲಿ ನಡೆಯುವ ದಿವ್ಯ ಬಲಿಪೂಜೆಯೊಂದಿಗೆ ಆರಂಭವಾಗಲಿದೆ.

1924ರಲ್ಲಿ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನಲ್ಲಿ ಜನಿಸಿ ಆಲ್ಫ್ರೆಡ್ ರೋಚ್ ಕ್ರೈಸ್ತ ಧರ್ಮಗುರುವಾಗಿ ರಾಜ್ಯದಾದ್ಯಂತ ಸೇವೆ ಸಲ್ಲಿಸಿ ಬ್ರಹ್ಮಾವರದಲ್ಲಿ ಹದಿನಾರು ವರ್ಷ ಜನಸೇವೆ ಮಾಡಿ 1996ರಲ್ಲಿ ಮೃತಪಟ್ಟರು. ಅವರ ಸಾತ್ವಿಕ ಜೀವನ, ನಿಸ್ವಾರ್ಥ ಸೇವೆ, ಬಡವರ ಅಭಿವೃದ್ಧಿಗೆ ಸಹಾಯ ಹಾಗೂ ಸೇವೆಗಳನ್ನು ಜನರು ಗೌರವಿಸಿ ಪುನೀತ ಪದವಿಗೇರಿಸುವ ಬಲವಾದ ಒತ್ತಾಯ ಕೇಳಿಬಂತು.

ಆಲ್ಫ್ರೆಡ್ ರೋಚ್ ನಿಧನರಾಗಿ 25 ವರ್ಷ ಕಳೆದರೂ ‘ಪುನೀತ’ ಪದವಿಗೇರಿಸಬೇಕೆಂಬ ಭಕ್ತರ ಪ್ರಬಲ ಬೇಡಿಕೆಯನ್ನು ಪರಿಗಣಿಸಿರುವ ವ್ಯಾಟಿಕನ್‍ನ ಸಂತರು ಹಾಗೂ ಪುನೀತರನ್ನಾಗಿ ಘೋಷಿಸುವ ವಿಭಾಗವು ಪ್ರಕ್ರಿಯೆ ಆರಂಭಿಸುವಂತೆ ಅನುಮತಿ ನೀಡಿದೆ.

ಪುನೀತ ಪದವಿಗೇರಿಸುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ ಹಾಗೂ ಸುದೀರ್ಘವಾಗಿದ್ದು, ಕೆಥೋಲಿಕ್ ಧರ್ಮಸಭೆಯ ನೇಮ-ನಿಯಮಗಳ ಪ್ರಕಾರ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಮೊದಲು ‘ಪುನೀತ’, ಅನಂತರ ‘ಸಂತ’ ಪದವಿಯನ್ನು ಪೋಪ್‌ ನೀಡಲಿದ್ದಾರೆ. ಪುನೀತ ಪದವಿಗೇರಿಸುವ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿ ಜೀವಿಸಿದ ಪರಿಸರದಲ್ಲಿ ನಡೆಸಲಾಗುವುದು.

ಗುರು ಆಲ್ಫ್ರೆಡ್ ರೋಚ್‍ ಉಡುಪಿಯವಾಗಿರುವುದರಿಂದ ಉಡುಪಿ ಧರ್ಮಪ್ರಾಂತದ ಮಟ್ಟದ ಪ್ರಕ್ರಿಯೆಯು ಡಿ.27ರಂದು ಆರಂಭವಾಗಲಿದೆ. ಆಲ್ಫ್ರೆಡ್ ರೋಚ್‍ ಅವರಿಗೆ ‘ಪುನೀತ ಪದವಿ’ ನಿಡುವ ಪ್ರಕ್ರಿಯೆ ಆರಂಭವಾಗುತ್ತಿರುವುದು ಗುರುಗಳ ಅಭಿಮಾನಿಗಳಿಗೆ ಹರ್ಷತಂದಿದೆ ಎಂದು ಉಡುಪಿ ಧರ್ಮಾಧ್ಯಕ್ಷರಾದ ಜೊರಾಲ್ಡ್ ಲೊಬೋ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT