ಸೋಮವಾರ, ಜುಲೈ 26, 2021
22 °C

ಉಡುಪಿ: 31 ಮಂದಿಯಲ್ಲಿ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬೆಂಗಳೂರು, ಮಂಗಳೂರು ಅಂತರ ಜಿಲ್ಲಾ ಪ್ರಯಾಣ ಬೆಳೆಸಿದ 9 ಮಂದಿ ಸೇರಿ ಜಿಲ್ಲೆಯಲ್ಲಿ ಬುಧವಾರ 31 ಜನರಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ 7 ಮಹಿಳೆಯರು, 21 ಪುರುಷರು ಹಾಗೂ ಮೂವರು ಮಕ್ಕಳು ಇದ್ದಾರೆ.

ಮಹಾರಾಷ್ಟ್ರದಿಂದ ಬಂದಿದ್ದ 7, ಅಬುದಾಬಿಯಿಂದ ಬಂದಿದ್ದ ಇಬ್ಬರು, ಮಸ್ಕತ್‌ನಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಪಿ.25297, 18674, 22944, 13352, 18674 ವ್ಯಕ್ತಿಗಳಿಂದ ಐವರಿಗೆ, ಪಿ.22930 ವ್ಯಕ್ತಿಯಿಂದ ಐವರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಬುಧವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಮೂವರು, ಸೋಂಕು ತಗುಲಿರವ ಶಂಕೆ ಇರುವ 132, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 60, ಐಎಲ್‌ಐ ಲಕ್ಷಣಗಳಿರುವ 30, ಕೋವಿಡ್‌ ಹಾಟ್‌ಸ್ಪಾಟ್‌ಗಳ ಸಂಪರ್ಕವಿದ್ದ 495 ಮಂದಿ ಸೇರಿ 720 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಪ್ರಯೋಗಾಲಯಗಳಿಂದ 3,080 ವರದಿಗಳು ಬರುವುದು ಬಾಕಿ ಇದೆ. ಇದುವರೆಗೂ ಜಿಲ್ಲೆಯಿಂದ 20,493 ಶಂಕಿತ ಸೋಂಕಿತರ ಮಾದರಿಗಳನ್ನು ರವಾನಿಸಲಾಗಿದ್ದು, 15,992 ನೆಗೆಟಿವ್ ಹಾಗೂ 1,421 ಪಾಸಿಟಿವ್ ಫಲಿತಾಂಶ ಬಂದಿದೆ. ಸೋಂಕಿನ ಲಕ್ಷಣಗಳು ಕಂಡುಬಂದ 24 ಜನರನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಳ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಗಮನಾರ್ಹ. 1,421 ಸೋಂಕಿತರಲ್ಲಿ ಈಗಾಗಲೇ 1,189 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 229 ಮಾತ್ರ.

ಜತೆಗೆ, ಸೋಂಕಿತರಲ್ಲಿ ಹೆಚ್ಚಿನವರು ಆರೋಗ್ಯವಂತರಾಗಿದ್ದು, ರೋಗ ನಿರೋಧಕ ಶಕ್ತಿಯೂ ಹೆಚ್ಚಿರುವುದರಿಂದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಗುಣಮುಖರಾಗಿರುವ ಪ್ರಮಾಣ ಹೆಚ್ಚಾಗಿದೆ. ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ತೀರಾ ಕಡಿಮೆ ಇದ್ದು, ಹೆಚ್ಚಿನ ಆರೈಕೆ ಹಾಗೂ ಔಷಧವಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು