ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸಾವಿರದ ಗಡಿಯತ್ತ ಕೋವಿಡ್‌ ಸೋಂಕು

ಶುಕ್ರವಾರ 22 ಮಂದಿಯಲ್ಲಿ ಸೋಂಕು ದೃಢ
Last Updated 12 ಜೂನ್ 2020, 14:21 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದ್ದು, ಶುಕ್ರವಾರ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 991ಕ್ಕೇರಿಕೆಯಾಗಿದೆ.

21 ಮಂದಿ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದು, ಸ್ಥಳೀಯ ಸಂಪರ್ಕದಿಂದ ಒಬ್ಬರಿಗೆ ಸೋಂಕು ಹರಡಿದೆ. ಸೋಂಕಿತರಲ್ಲಿ 13 ಪುರುಷರು, 6 ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.

ಸೋಂಕಿನ ಸ್ಥಳೀಯ ಸಂಪರ್ಕ ಪತ್ತೆಹಚ್ಚಲಾಗಿದ್ದು, ಈಚೆಗೆ ಸೋಂಕು ಕಾಣಿಸಿಕೊಂಡಿದ್ದ ಲ್ಯಾಬ್‌ ಟೆಕ್ನಿಷನ್‌ ಕುಟುಂಬದ ಸದಸ್ಯರೊಬ್ಬರಲ್ಲಾದ 71 ವರ್ಷದ ವೃದ್ಧರಲ್ಲಿ ಸೋಂಕು ದೃಢಪಟ್ಟಿದೆ. ಈಚೆಗೆ ಅವರ ಮಗುವಿಗೂ ಸೋಂಕು ತಗುಲಿತ್ತು ಎಂದು ತಿಳಿಸಿದರು.

ಗುರುವಾರದವರೆಗೂ 658 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಗಳಿಂದ ಡಿಸ್‌ಚಾರ್ಜ್ ಆಗಿದ್ದರು. ಶುಕ್ರವಾರ 50 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಶುಕ್ರವಾರ ಹಾಗೂ ಶನಿವಾರ ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಇದುವರೆಗೂ ಜಿಲ್ಲೆಯಲ್ಲಿ 708 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ಉಳಿದ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 7 ದಿನಗಳ ಬಳಿಕ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಶೀಘ್ರವೇ ಸೋಂಕಿತರೆಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

72 ಮಂದಿ ಮಾದರಿ ಸಂಗ್ರಹ:

ಶುಕ್ರವಾರ ಐಎಲ್‌ಐ ಲಕ್ಷಣಗಳಿರುವ 24, ಇಬ್ಬರು ಸೋಂಕಿತರ ಸಂಪರ್ಕ ಇರುವವರು ಹಾಗೂ ಕೋವಿಡ್‌ ಹಾಟ್‌ಸ್ಪಾಟ್‌ಗಳ ಸಂಪರ್ಕ ಹೊಂದಿದ 46 ಮಂದಿಯ ಕಫದಮಾದರಿಯನ್ನು ಪ್ರಯೋಗಾಲಗಳಿಗೆ ಕಳುಹಿಸಲಾಗಿದೆ.

ಸೋಂಕಿನ ಲಕ್ಷಣಗಳು ಕಂಡುಬಂದ 14 ಮಂದಿಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 72 ಜನರ ವರದಿ ಬರುವುದು ಬಾಕಿ ಇದೆ.

ಮತ್ತೊಂದೆಡೆ, ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಮುಂಬೈನಿಂದ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಗೆ ಬಂದವರನ್ನು 14 ದಿನಗಳ ಹೋಂ ಕ್ವಾರಂಟೈನ್‌ ಹಾಗೂ ಅವರು ವಾಸಮಾಡುವ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಈ ಮೂಲಕ ಸಮುದಾಯಕ್ಕೆ ಸೋಂಕು ಹರಡುವುದನ್ನು ತಡೆಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT