ಶುಕ್ರವಾರ, ಆಗಸ್ಟ್ 19, 2022
27 °C
167 ಮಂದಿಗೆ ಕೋವಿಡ್‌; 250 ಸೋಂಕಿತರು ಗುಣಮುಖ

ಕೋವಿಡ್‌: 100ರ ಗಡಿದಾಟಿದ ಸಾವಿನ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಮೂವರು ಕೋವಿಡ್‌ ಸೋ‌ಂಕಿತರ ಸಾವಿನೊಂದಿಗೆ ಇದುವರೆಗೂ ಮೃತಪಟ್ಟ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಹೊಸದಾಗಿ 167 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಕೋವಿಡ್‌ ಸೋಂಕು ಸೇರಿದಂತೆ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಉಡುಪಿ ತಾಲ್ಲೂಕಿನ 70, 85, 85 ವರ್ಷದ ವೃದ್ಧರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಒಟ್ಟು ಮೃತ ಸೋಂಕಿತರ ಸಂಖ್ಯೆ 102ಕ್ಕೇರಿದೆ.

ಬುಧವಾರ ಪತ್ತೆಯಾದ 167 ಸೋಂಕಿತ ಪ್ರಕರಣಗಳಲ್ಲಿ ಉಡುಪಿಯ 92, ಕುಂದಾಪುರದ 19 ಹಾಗೂ ಕಾರ್ಕಳದ 52 ಹಾಗೂ ಇತರೆ ಜಿಲ್ಲೆಗಳ ನಾಲ್ವರು ಇದ್ದಾರೆ. 101 ಪುರುಷರು, 66 ಮಹಿಳೆಯರಿಗೆ ಸೋಂಕು ತಗುಲಿದೆ. 112 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ, 55 ಜನರಲ್ಲಿ ಲಕ್ಷಣಗಳು ಇಲ್ಲ.

971 ಮಾದರಿ ಸಂಗ್ರಹ: ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಾಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ 971 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. 357 ವರದಿಗಳು ಬರುವುದು ಬಾಕಿ ಇದೆ.‌

ಸೋಂಕಿನಿಂದ 250 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಗುಣರಾದವರ ಸಂಖ್ಯೆ 9,601ಕ್ಕೆ ಹೆಚ್ಚಳವಾಗಿದೆ. ಸದ್ಯ 2221 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 1090 ಕೋವಿಡ್‌ ಆಸ್ಪತ್ರೆಗಳಲ್ಲಿದ್ದರೆ, 1131 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 11,924 ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು