ಮಂಗಳವಾರ, ನವೆಂಬರ್ 24, 2020
19 °C

ಉಡುಪಿ: 116 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬುಧವಾರ ಜಿಲ್ಲೆಯಲ್ಲಿ 116 ಕೋವಿಡ್–19 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 21,153ಕ್ಕೆ ಏರಿಕೆಯಾಗಿವೆ.

ಸೋಂಕಿತರಲ್ಲಿ ಉಡುಪಿಯ 65,  ಕುಂದಾಪುರದ 22, ಕಾರ್ಕಳದ 22 ಹಾಗೂ ಬೇರೆ ಜಿಲ್ಲೆಯ ಒಬ್ಬರು ಇದ್ದಾರೆ. 63 ಪುರುಷರಿಗೆ, 53 ಮಹಿಳೆಯರಿಗೆ ಸೋಂಕು ತಗುಲಿದ್ದು, 33 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ, 83 ಜನರಲ್ಲಿ ಲಕ್ಷಣಗಳು ಪತ್ತೆಯಾಗಿಲ್ಲ.

ಬುಧವಾರ 191 ಸೋಂಕಿತರು ಸೇರಿ ಜಿಲ್ಲೆಯಲ್ಲಿ 19,305 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರು 1,688 ಇದ್ದು, 176 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು