ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲಗಿರಿ: ರಂಜಿಸಿದ ‘ಗೊಬ್ಬುದ ಗಮ್ಮತ್ತು’

Last Updated 15 ಅಕ್ಟೋಬರ್ 2022, 4:18 IST
ಅಕ್ಷರ ಗಾತ್ರ

ಕೊಳಲಗಿರಿ (ಬ್ರಹ್ಮಾವರ): ಕೊಳಲಗಿರಿ ಸೇಂಟ್ ಕ್ಸೇವಿಯರ್ ಶಾಲಾ ಮೈದಾನದಲ್ಲಿಈಚೆಗೆ ನಡೆದ ‘ಗೊಬ್ಬುದ ಗಮ್ಮತ್ತು’ ಕಾರ್ಯಕ್ರಮ ಮತ್ತು ಕ್ರಿಕೆಟ್ ಟೂರ್ನಿಯನ್ನು ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ರಾಯಲ್ ರತ್ನಾಕರ್ ಡಿ. ಶೆಟ್ಟಿ ಉದ್ಘಾಟಿಸಿದರು.

ಶಾಸಕ ಕೆ.ರಘುಪತಿ ಭಟ್, ಸಂಚಾಲಕ ಅಶ್ವಿನ್ ರೋಚ್‌ ಮತ್ತು ಸಮಾಜ ಸೇವಕ ಫ್ರಾಂಕಿ ಡಿಸೋಜ ಅವರನ್ನು ಸನ್ಮಾನಿಸಿದರು.

ಕೊಳಲಗಿರಿ ಚರ್ಚ್‌ ಧರ್ಮಗುರು ಫಾ.ಅನಿಲ್ ಪ್ರಕಾಶ್ ಕ್ಯಾಸ್ತಲಿನೋ, ಅಮ್ಮುಂಜೆ ಚರ್ಚ್ ಧರ್ಮಗುರು ಫಾ.ಡೇವಿಡ್ ಕ್ರಾಸ್ತಾ, ಉಪ್ಪೂರು ವ್ಯವಸಾಯ ಸೇವಾ ಸಂಹಕಾರಿ ಸಂಘದ ಎನ್.ರಮೇಶ್ ಶೆಟ್ಟಿ, ಉಪ್ಪೂರು ಪಂಚಾಯಿತಿ ಅಧ್ಯಕ್ಷ ಮಹೇಶ್ ಕೋಟ್ಯಾನ್, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಮೇಶ್ ಕರ್ಕೇರ, ಪಂಚಾಯಿತಿ ಸದಸ್ಯರಾದ ರಾಜಶ್ರೀ ಮಸ್ಕರೇನಸ್, ಪ್ರಶಾಂತ್ ಮಾಯಾಡಿ, ಧರಣೇಶ್ ಲಕ್ಷ್ಮೀನಗರ, ಬಾಲಕೃಷ್ಣ ಶೆಟ್ಟಿ ನರ್ನಾಡು, ಪ್ರಶಾಂತ್ ಶೆಟ್ಟಿ ಅಮ್ಮುಂಜೆ, ಎ.ಸದಾನಂದ ನಾಯಕ್, ಗಣೇಶ್ ಡಿ ಪೂಜಾರಿ, ಸ್ಯಾಕ್ಸೊಫೋನ್ ಕಲಾವಿದ ಪಾಂಡುರಂಗ ಪಡ್ಡಂ, ಮಾಧವ್ ಪಾಣ, ಸಮಾಜ ಸೇವಕಿ ರೇಖಾ ಮರಾಠೆ ಇದ್ದರು.

ದಿನೇಶ್‌ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್‌ ದೇವಾಡಿಗ ವಂದಿಸಿದರು. ಅವಿನಾಶ್‌ ಮತ್ತು ಶಾಂತಾ ಸೆಲ್ವರಾಜ್‌ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಯೋಗೀಶ್‌ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT