ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದ ಉಪನಿಷತ್ತುಗಳಲ್ಲಿ ಪ್ರಜಾಪ್ರಭುತ್ವ ಆಧಾರ ರಹಿತ

Last Updated 26 ನವೆಂಬರ್ 2022, 15:26 IST
ಅಕ್ಷರ ಗಾತ್ರ

ಉಡುಪಿ: ವೇದ ಉಪನಿಷತ್ತುಗಳ ಕಾಲದಲ್ಲಿ ಪ್ರಜಾಪ್ರಭುತ್ವ ಇತ್ತು ಎಂಬ ಕೇಂದ್ರ ಸರ್ಕಾರದ ಸುತ್ತೋಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟ ಸರ್ಕಾರದ ಸುತ್ತೋಲೆ ಹರಿದು ಪ್ರತಿಭಟನೆ ನಡೆಸಿತು.

ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಸಂಚಾಲಕ ಜಯನ್ ಮಲ್ಪೆ ಮಾತನಾಡಿ, ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸುಳ್ಳು ಸುತ್ತೋಲೆಗಳನ್ನು ಹೊರಡಿಸಲಾಗುತ್ತಿದೆ. ಸಂವಿಧಾನ ನಾಶ ಮಾಡುವ ಸಂಚು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆ ವೇದಗಳ ಕಾಲದಿಂದಲೂ ಇತ್ತು ಎಂಬ ಕೇಂದ್ರ ಸರ್ಕಾರದ ಪುರಾತತ್ವ ಶಾಸ್ತ್ರ ವಿಭಾಗ ಮತ್ತು ಯುಜಿಸಿ ಸುತ್ತೋಲೆ ವಿವಾದಾತ್ಮಕ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಹೋದರತೆ ಅಂಶಗಳನ್ನು ಬುದ್ದನ ಭೋಧನೆಯಿಂದ ಹಾಗೂ ಪ್ರಜಾ ಪ್ರಭುತ್ವ ಪರಿಕಲ್ಪನೆಯನ್ನು ಅಮೆರಿಕಾ, ಇಂಗ್ಲೆಂಡ್, ಐರ್ಲೆಂಡ್‌ನ ಸಂವಿಧಾನದಿಂದ ಪಡೆದಿರುವುದಾಗಿ ಹೇಳಿದ್ದು ಈ ಬಗ್ಗೆ ದಾಖಲೆಗಳು ಇವೆ.

ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ವೇದ ಉಪನಿಷತ್ತುಗಳ ಬಗ್ಗೆ ಚರ್ಚೆ, ಪ್ರಸ್ತಾಪ ಇಲ್ಲ. ಸಂವಿಧಾನ ಮಂಡಿಸುವ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲೂ ಉಲ್ಲೇಖಗಳಿಲ್ಲ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಅಂಬೇಡ್ಕರ್ ಹಾಗೂ ಸಂವಿಧಾನ ರಚನೆಗೆ ಕಾರಣರಾದ ಮೇಧಾವಿ ನಾಯಕರ ಕೊಡುಗೆ ಕಡೆಗಣಿಸಲು ಹೊಸ ಇತಿಹಾಸ ರಚಿಸಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ನೈಜ ಇತಿಹಾಸ ತಿರುಚಲು, ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ನೀಡಿರುವ ಕೊಡುಗೆಗಳ ಪ್ರಭಾವ ಕುಂದಿಸಲು ಪ್ರಭಾಪ್ರಭುತ್ವವಾದಿಗಳು ಅವಕಾಶ ನೀಡುವುದಿಲ್ಲ. ಮುಂದೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT