ಮಣಿಪಾಲದ ವಿದ್ಯಾರತ್ನ ನಗರದ 8ನೇ ಕ್ರಾಸ್ ಬಳಿ ಚರಂಡಿ ಉಕ್ಕಿಹರಿದು ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ
ಉಡುಪಿ ನಗರದ ಶಾರದ ಮಂಟಪ ಬಳಿಯ ತೋಡಿನ ನೀರು ಕಲುಷಿತವಾಗಿರುವುದು
ಉಡುಪಿ ನಗರದ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು
ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಚರಂಡಿಯ ದುರವಸ್ಥೆ

ಜನರು ಚರಂಡಿಗ ಕಸ ಇತರ ವಸ್ತುಗಳನ್ನು ಎಸೆಯುವುದರಿಂದ ಅದು ಒಳ ಚರಂಡಿಯಲ್ಲಿ ಸಂಗ್ರಹಗೊಂಡು ಕೊಳಚೆ ನೀರು ಉಕ್ಕಿ ಹರಿಯುತ್ತದೆ. ಆಗಾಗ ಒಳಚರಂಡಿಯಿಂದ ಕಸ ತೆರವುಗೊಳಿಸಲಾಗುತ್ತದೆ
ಉದಯ್ ಕುಮಾರ್ ಶೆಟ್ಟಿ ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ
ನಗರಸಭೆಯವರು ಚರಂಡಿ ಸ್ವಚ್ಛತೆಗೆ ಮಳೆಗಾಲ ಬರಲಿ ಎಂದು ಕಾಯಬಾರದು . ಈಗಲೇ ಚರಂಡಿಯ ಹೂಳು ತೆಗೆದು ಅದನ್ನು ಬೇರೆಡೆಗೆ ಸಾಗಿಸಬೇಕು. ನಗರದಲ್ಲಿ ಒಳಚಂಡಿ ಇರುವ ಪ್ರದೇಶದ ಬಹುತೇಕ ಬಾವಿಗಳ ನೀರು ಕಲುಷಿತವಾಗಿದೆ
ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
ಮಣಿಪಾಲದ ವಿದ್ಯಾರತ್ನ ನಗರದ 8ನೇ ಕ್ರಾಸ್ ಬಳಿ ಚರಂಡಿ ಉಕ್ಕಿ ಹರಿದು ಕೊಳಚೆ ನೀರು ರಸ್ತೆಯಲ್ಲೆ ಹರಿಯುವ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಜಿಲ್ಲಾಧಿಕಾರಿ ಇತರ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ
ದಿನೇಶ್ ಶೆಣೈ ವಿದ್ಯಾರತ್ನ ನಗರ ನಿವಾಸಿ