ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ನಾಟಕ ಸ್ಪರ್ಧೆ: ಬೆಂಗಳೂರಿನ ಸಮಷ್ಠಿ ತಂಡ ಪ್ರಥಮ

ರಂಗಭೂಮಿ ಉಡುಪಿಯ ರಾಜ್ಯಮಟ್ಟದ ನಾಟಕ ಸ್ಪರ್ಧೆ
Last Updated 3 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆ ಆಯೋಜಿಸಿದ್ದ ಡಾ.ಟಿ.ಎಂ.ಎ.ಪೈ, ಎಸ್‌.ಎಲ್‌.ನಾರಾಯಣ ಭಟ್‌, ಮಲ್ಪೆ ಮಧ್ವರಾಜ್ ಸ್ಮಾರಕ 40ನೇರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರಿನ ಸಮಷ್ಠಿ ತಂಡದ‘ನೀರು ಕುಡಿಸಿದ ನೀರೆಯರು’ ನಾಟಕಕ್ಕೆ ಪ್ರಥಮ ಬಹುಮಾನ ದೊರೆತಿದೆ.

ಪ್ರಥಮ ಬಹುಮಾನವಾಗಿ ವಿಜೇತ ತಂಡಕ್ಕೆ ₹ 25,000 ನಗದು, ಸ್ಮರಣಿಕೆ ಹಾಗೂ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ ನೀಡಲಾಗುವುದು.

ದ್ವಿತೀಯ ಬಹುಮಾನ ಬೆಂಗಳೂರಿನಅದಮ್ಯ ರಂಗ ಸಂಸ್ಕೃತಿ ಪ್ರತಿಷ್ಠಾನ ತಂಡದ ‘ಮೀಡಿಯ’ ನಾಟಕಕ್ಕೆ ಲಭಿಸಿದ್ದು, ₹25,000 ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ಮಂಗಳೂರಿನ ರಂಗ ಸಂಗಾತಿ ಸಂಸ್ಕೃತಿ ಪ್ರತಿಷ್ಠಾನದ ‘ಮರ ಗಿಡ ಬಳ್ಳಿ’ ನಾಟಕ ತೃತೀಯ ಬಹುಮಾನ ಪಡೆದಿದ್ದು, ₹ 15,000 ನಗದು ಮತ್ತು ಸ್ಮರಣಿಕೆಗೆ ಪಾತ್ರವಾಗಿದೆ.

ಶ್ರೇಷ್ಠ ನಿರ್ದೇಶನ:ಮಂಜುನಾಥ ಬಡಿಗೇರ ನಿರ್ದೇಶನದ ನಾಟಕ ನೀರು ಕುಡಿಸಿದ ನೀರೆಯರು ನಾಟಕಕ್ಕೆ ಪ್ರಥಮ ಶ್ರೇಷ್ಠ ನಿರ್ದೇಶನ ಪ್ರಶಸ್ತಿ ದೊರೆತರೆ,ಮಾಲತೇಶ ಬಡಿಗೇರ ನಿರ್ದೇಶನದ ‘ಮೀಡಿಯಾ’ ನಾಟಕವು ದ್ವಿತೀಯ,‘ಎಸ್.ರಾಮು ನಿರ್ದೇಶನದ ‘ಕೋರ್ಟ್ ಮಾರ್ಷಲ್’ಗೆ ತೃತೀಯ ಬಹುಮಾನ ಸಿಕ್ಕಿದೆ.

ಶ್ರೇಷ್ಠ ನಟ:ನೀರು ಕುಡಿಸಿದ ನೀರೆಯರು ನಾಟಕದ ‘ಕಾಳಿಂಗ ರಾಯ’ ಪಾತ್ರಧಾರಿ ಹರಿ ಸಮಷ್ಠಿ ಅವರಿಗೆ ಶ್ರೇಷ್ಠ ನಟಪ್ರಥಮ ಪ್ರಶಸ್ತಿ, ಕೋರ್ಟ್ ಮಾರ್ಷಲ್ ನಾಟಕದ ‘ಕ್ಯಾಪ್ಟನ್ ಬಿಕಾಶ್ ರಾಯ್’ ಪಾತ್ರಧಾರಿ ಅಂಕರಾಜು ಅವರಿಗೆ ದ್ವಿತೀಯ, ನಾಯೀಕತೆ ನಾಟಕದ ‘ನಾಯಿ ಮಗ’ ಪಾತ್ರಧಾರಿ ನವೀನ್ ಅವರಿಗೆ ತೃತೀಯ ಬಹುಮಾನ ದೊರೆತಿದೆ.

ಶ್ರೇಷ್ಠ ನಟಿ:ಮರ-ಗಿಡ-ಬಳ್ಳಿ ನಾಟಕದ ‘ಮಂದಕ್ಕ’ ಪಾತ್ರಧಾರಿ ಮಂಜುಳಾ ಜರ್ನಾಧನ್ ಅವರಿಗೆ ಶ್ರೇಷ್ಠನಟಿ (ಪ್ರಥಮ), ಮೀಡಿಯ ನಾಟಕದ ‘ಮೀಡಿಯ’ ಪಾತ್ರಧಾರಿ ಛಾಯಾ ಭಾರ್ಗವಿ ಅವರಿಗೆ ದ್ವಿತೀಯ,ಜಾಳ ಪೋಳ ನಾಟಕದ ‘ಗುಂಡಕ್ಕ’ ಪಾತ್ರಧಾರಿ ಪ್ರತಿಭಾ ವಕ್ಕುಂದ ಅವರಿಗೆ ತೃತೀಯ ಪ್ರಶಸ್ತಿ ಸಿಕ್ಕಿದೆ.

ಶ್ರೇಷ್ಠ ಸಂಗೀತ:ಮಾಯಾ ಬೇಟೆ ನಾಟಕಕ್ಕೆ ಪ್ರಥಮ, ನಾಯೀಕತೆ ನಾಟಕಕ್ಕೆ ದ್ವಿತೀಯ,ನೀರು ಕುಡಿಸಿದ ನೀರೆಯರು ನಾಟಕಕ್ಕೆ ತೃತೀಯ ಪ್ರಶಸ್ತಿ ಘೋಷಿಸಲಾಗಿದೆ. ನ.21ರಿಂದ ಡಿ.2ರವರೆಗೆ ಉಡುಪಿಯಲ್ಲಿ ನಾಟಕ ಸ್ಪರ್ಧೆಗಳು ನಡೆದಿತ್ತು. ಪ್ರೊ.ಎಂ.ಎಲ್.ಸಾಮಗ, ಜಯರಾಂ ನೀಲಾವರ, ಬಾಸುಮಾ ಕೊಡಗು, ಪಿ.ಬಿ.ಪ್ರಸನ್ನ, ಪ್ರಭಾಕರ ತುಮುರಿ ತೀರ್ಪುಗಾರರಾಗಿದ್ದರು.

ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ ಜ.4ರಂದು ಹಾಗೂ 40ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸ್ಮರಣ ಸಂಚಿಕೆ ಕಲಾಂಜಲಿ ಬಿಡುಗಡೆ ಕಾರ್ಯಕ್ರಮ ಜ.5ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ‘ಸಮಷ್ಠಿ ಬೆಂಗಳೂರು’ ತಂಡದ ‘ನೀರು ಕುಡಿಸಿದ ನೀರೆಯರು‌’ ನಾಟಕದ ಮರು ಪ್ರದರ್ಶನ ಇರಲಿದೆ ಎಂದು ರಂಗಭೂಮಿ ಕಾರ್ಯಕಾರಿ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT