ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

72 ಗಂಟೆಗಳಲ್ಲಿ ಮಾಸಾಶನ: ಸಚಿವ ವಿ.ಸುನಿಲ್ ಕುಮಾರ್

Last Updated 7 ಸೆಪ್ಟೆಂಬರ್ 2022, 3:09 IST
ಅಕ್ಷರ ಗಾತ್ರ

ಕಾರ್ಕಳ: ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ಕಂದಾಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇಲ್ಲ. ಮನೆಯಲ್ಲೇ ಕುಳಿತು 155 ಅಥವಾ 245 ನಂಬರ್‌ಗೆ ಕರೆ ಮಾಡಿದಲ್ಲಿ 72 ಗಂಟೆಗಳಲ್ಲೇ ಅರ್ಹ ಫಲಾನುಭವಿಗಳಿಗೆ ಮಾಸಾಶನ ಲಭಿಸುವ ವ್ಯವಸ್ಥೆ ಆಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಫಲಾನುಭವಿಗಳಿಗೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಸವಲತ್ತು ವಿತರಿಸಿ ಅವರು ಮಾತನಾಡಿದರು. ಇದು ರಾಜ್ಯ ಸರ್ಕಾರದ ಸ್ಪಂದನಾಶೀಲತೆಗೆ ಸಾಕ್ಷಿಯಾಗಿದೆ. ಕಾರ್ಕಳದ ಜನತೆಗೆ ಸರ್ಕಾರದ ಸೌಲಭ್ಯ ಗರಿಷ್ಠ ಪ್ರಮಾಣದಲ್ಲಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಆರು ಕುಟುಂಬಗಳಿಗೆ ತರಕಾರಿ ಕಿಟ್, ಐದು ಕುಟುಂಬಗಳಿಗೆ ಮೇವಿನ ಕಿಟ್, ಎರಡು ಕುಟುಂಬಗಳಿಗೆ ಜೇನು ಕೃಷಿ ಪೆಟ್ಟಿಗೆ, 8 ಮಂದಿಗೆ ಫಸಲ್ ಬಿಮಾ ಯೋಜನೆ ಸೌಲಭ್ಯ, ತೋಟಗಾರಿಕೆ ಇಲಾಖೆಯಿಂದ 25 ಮಂದಿಗೆ ತೆಂಗಿನ ಮರ ಹತ್ತುವ ವಿಮಾ ಬಾಂಡ್ ಹಸ್ತಾಂತರಿಸಲಾಯಿತು. ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕ ಮಹಮ್ಮದ್ ರಿಯಾಜ್ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT