ಶಿರ್ವ: ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ದಶಕಗಳ ಹಿಂದೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ‘ಗುರುವಂದನಾ’ ಕಾರ್ಯಕ್ರಮ ನಡೆಯಿತು.

ಬಂಟಕಲ್ಲು ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದೆ ಗುರುಗಳಿಂದ ಪಾಠ ಕಲಿತ ವಿದ್ಯಾರ್ಥಿಗಳು ತಮ್ಮ 50ರ ಹರೆಯದಲ್ಲಿ ಜೊತೆಗೂಡಿ, ತಮಗೆ ಕಲಿಸಿದ ಗುರುಗಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಸನ್ಮಾನಿಸಿದರು.

ಶಿಕ್ಷಕರಾದ ಲೀಲಾವತಿ ಎಂ. ಬಂಟಕಲ್ಲು, ಜಯಂತಿ ಬಾಪಿಲಾರು, ಅನಸೂಯಾ ಕಳತ್ತೂರು, ಹಿಲ್ಡಾ ಸಲ್ಡಾನ್ಹಾ ಪಾಂಬೂರು, ಬಿ.ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ನಾಯಕ್ ಪುನಾರು, ದಿ.ಅನಂತರಾಮ ಭಟ್ ಪರವಾಗಿ ಶ್ರೀಕಾಂತ್ ಭಟ್, ದಿ.ಶಂಕರನಾರಾಯಣ ರಾವ್ ಪರವಾಗಿ ರಾಘವೇಂದ್ರ ಸ್ವಾಮಿ, ದಿ.ಶಂಕರ ಬಿ.ಪರವಾಗಿ ಅವರ ಪತ್ನಿ ಲಕ್ಷ್ಮಿ ಗೌರವ ಸ್ವೀಕರಿಸಿದರು.

ಉಡುಪಿ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಕರಂಬಳ್ಳಿ ಭಾಗ್ಯಶ್ರೀ ಐತಾಳ್ ಮಾತನಾಡಿ, ವಿದ್ಯಾಧಿದೇವತೆ ಗಣಪತಿಯ ಸನ್ನಿಧಾನದಲ್ಲಿ, ಐವತ್ತರ ಹರೆಯದಲ್ಲಿಯೂ ತಮ್ಮ ಆರಂಭದ ಶಿಕ್ಷಣಕ್ಕೆ ಬುನಾದಿ ಹಾಕಿಕೊಟ್ಟ ಗುರುಗಳನ್ನು ಸ್ಮರಿಸಿ ಗೌರವಿಸಿದ್ದು, ಗುರು–ಶಿಷ್ಯರ ಸಂಗಮಕ್ಕೆ ಸಾಕ್ಷಿಯಾಗಲು ಅವಕಾಶವಾಯಿತು ಎಂದರು.

ತಾಯಿ, ತಂದೆ, ಆಚಾರ್ಯರು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು. ಅವರ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಸ್ನೇಹ, ಒಲವು, ಪ್ರೀತಿಯನ್ನು ಪರರಿಗೆ ಹಂಚಬೇಕು. ಯಶಸ್ಸು ಎನ್ನುವುದು ಸಾಧಕನಿಗೆ ಸಿಗುವಂಥದ್ದು. ಪರಿಶ್ರಮದಿಂದ ಸಾಧಕನಾಗಬೇಕು. ಕ್ಷುಲ್ಲಕ ಪ್ರಚೋದನೆಗಳಿಗೆ ಒಳಗಾಗದೆ ಸಮಚಿತ್ತದಿಂದ ನಡೆದು ಜೀವನದಲ್ಲಿ ಮುನ್ನಡೆಯಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು. ಸಮಿತಿಯ ಗೌರವ ಅಧ್ಯಕ್ಷ ಶಂಕರ ನಾಯಕ್ ಬಂಟಕಲ್ಲು ಸ್ವಾಗತಿಸಿದರು. ಶ್ರೀನಿಧಿ ದೇವಾಡಿಗ ಪ್ರಾರ್ಥಿಸಿದರು. ಮಾಧವ ಆಚಾರ್ಯ ಹೇರೂರು ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ದಿನೇಶ ದೇವಾಡಿಗ ವಂದಿಸಿದರು. ನಂತರ ಮಿತ್ರ ಬಳಗ ಹೇರೂರು ಇವರಿಂದ ರವಿಕುಮಾರ್ ಕಡೆಕಾರ್ ವಿರಚಿತ ‘ಕಡಲ್ ಸೇರಂದಿ ಸುದೆ’ ತುಳು ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.