ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡುಪಿಯಲ್ಲಿ ಸುರಿದಿದ್ದು ಬೂದಿ ಮಳೆ’

ಸುರತ್ಕಲ್‌ನ ಎನ್‌ಐಟಿಕೆ ನೀಡಿರುವ ವರದಿಯಲ್ಲಿ ಸ್ಪಷ್ಟ: ಡಾ.ಪಿ.ವಿ.ಭಂಡಾರಿ, ರಾಜಾರಾಂ ತಲ್ಲೂರು
Last Updated 5 ಸೆಪ್ಟೆಂಬರ್ 2018, 13:38 IST
ಅಕ್ಷರ ಗಾತ್ರ

ಉಡುಪಿ: ಆಗಸ್ಟ್‌ 3 ಹಾಗೂ 4ರಂದು ನಗರದಲ್ಲಿ ಸುರಿದಿದ್ದು ಬೂದಿಮಿಶ್ರಿತ ಮಳೆ ಎಂದು ಸುರತ್ಕಲ್‌ನ ಎನ್‌ಐಟಿಕೆ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ ನೀಡಿರುವ ವರದಿಯಲ್ಲಿ ಸ್ಪಷ್ಟವಾಗಿದೆ ಎಂದು ವೈದ್ಯಡಾ.ಪಿ.ವಿ.ಭಂಡಾರಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರುಉಡುಪಿಪರಿಸರದಲ್ಲಿ ಮಳೆಯ ರೂಪದಲ್ಲಿ ಉದುರಿದಬಿಳಿಯ ವಸ್ತುವನ್ನು ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಪಾಸಣೆ ನಡೆಸಿದ ಎನ್‌ಐಟಿಕೆ ವಿಶ್ಲೇಷಣಾವರದಿ ನೀಡಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವರದಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.‌

ಮಾಲಿನ್ಯನಿಯಂತ್ರಣಮಂಡಳಿಸಂಗ್ರಹ ಮಾಡಿದಮಾದರಿಯಲ್ಲಿ ಶೇ 71.43 ಬೂದಿ, 12.51 ಫಿಕ್ಸೆಡ್ ಕಾರ್ಬನ್‌, ಶೇ 10.92 ವಲಟೈಲ್‌ ರಾಸಾಯನಿಕಗಳು ಹಾಗೂ ಶೇ 5.09ರಷ್ಟು ತೇವಾಂಶಇರುವುದಾಗಿ ವರದಿಯಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದರು.

ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅವಘಡಗಳನ್ನು ನಾವು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬೂದಿ ಮಳೆ ಸುರಿದ ಬಗ್ಗೆ ನಾಗರಿಕರು ಎಚ್ಚೆತ್ತುಕೊಳ್ಳಬೇಕು.ಈ ಪ್ರಕರಣದ ಸುತ್ತಮುತ್ತಲಿನ ಕೈಗಾರಿಕೆಗಳು ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಸೂಚನೆಗಳನ್ನು ತೋರಿಸುತ್ತಿದೆ ಎಂದು ಅವರು ಆರೋಪಿಸಿದರು.

ಎಂಡೋಸಲ್ಫಾನ್ ಸಮಸ್ಯೆಯನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕಂಡಿದ್ದೇವೆ.ಸರ್ಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಹಾರುಬೂದಿಯ ವಿಷಯದಲ್ಲೂ ಇದು ಪುನರಾವರ್ತನೆ ಆಗದಿರಲಿ.ಜನಸಾಮಾನ್ಯರಿಗೆ ಬದುಕುವ ಹಕ್ಕುಬೇಕೇ ಹೊರತು ಬದುಕಲಾಗದ ಅಭಿವೃದ್ಧಿ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಉಡುಪಿ ಜನರ ಮೈಮೇಲೆಬೂದಿಉದುರಿದಾಗಲೂ ಜನ ಗಟ್ಟಿಯಾಗಿ ಮಾತನಾಡದಿದ್ದರೆ, ನಾಗರಿಕ ಜವಾಬ್ದಾರಿಗಳಿಗೆ ಅಪಚಾರ ಮಾಡಿದಂತೆ. ಜಿಲ್ಲಾಡಳಿತ,ಮಾಲಿನ್ಯನಿಯಂತ್ರಣಮಂಡಳಿ,ಪರಿಸರ ಇಲಾಖೆಗಳು ತುರ್ತಾಗಿ ಕ್ರಮಕೈಗೊಂಡು ನಾಗರಿಕರಿಗೆರಕ್ಷಣೆಯಅಭಯನೀಡಬೇಕು. ಇಲ್ಲವಾದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬೇಕಾಗುತ್ತದೆ ಎಂದು ಪತ್ರಕರ್ತ ರಾಜಾರಾಂತಲ್ಲೂರು ಎಚ್ಚರಿಕೆ ನೀಡಿದರು.

ಪ್ರಕರಣಕ್ಕೆ ಇಂಥವರೇ ಕಾರಣ ಎಂದು ಯಾರ ವಿರುದ್ಧವೂ ಬೊಟ್ಟು ಮಾಡುವುದಿಲ್ಲ. ಆದರೆ, ತಪ್ಪು ಯಾರಿಂದ ಆಗಿದೆ ಎಂಬುದನ್ನು ಪತ್ತೆಹಚ್ಚಬೇಕು. ಸತ್ಯವನ್ನು ಸಾರ್ವಜನಿಕರಗಮನಕ್ಕೆತರಬೇಕು. ಹಾಗೂ ಇಂತಹ ಘಟನೆಗಳನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದುರಾಜಾರಾಂತಲ್ಲೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT