ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಯೋಗ ದಿನಕ್ಕೆ ಯೋಗ ಗುರು ಶ್ರೀಧರ್ ಕಾರಣ’

ವಿಶ್ವಯೋಗ ದಿನಕ್ಕೆ ಕಾರಣ: ರಾಜ್ಯದ ಯೋಗ ಗುರು ಶ್ರೀಧರ್
Last Updated 23 ಜೂನ್ 2022, 2:06 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಾರ್ಕಳ: ಜಗತ್ತಿನ ನೂರೈವತ್ತಕ್ಕೂ ಅಧಿಕ ರಾಷ್ಟ್ರಗಳು ಇಂದು ಯೋಗದಿನವನ್ನು ಆಚರಿಸುತ್ತಿವೆ. ನಮ್ಮ ದೇಶ ವಿಶ್ವಯೋಗ ದಿನವನ್ನು ಆಚರಿಸಲು ಮುಖ್ಯ ಕಾರಣ ರಾಜ್ಯದ ಯೋಗ ಗುರು ಶ್ರೀಧರ್ ಎಂದು ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷ ಸಿ.ಎ. ಜಗದೀಶ್ ಹೇಳಿದರು.

ಇಲ್ಲಿನ ಭುವನೇಂದ್ರ ಕಾಲೇಜಿನ ಐಕ್ಯೂಎಸಿ, ಎನ್.ಎಸ್.ಎಸ್, ಎನ್.ಸಿ.ಸಿ. ಹಾಗೂ ಕ್ರೀಡಾಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಯೋಗ ಗುರು ಶ್ರೀಧರ್ ಮೋದಿಯವರು ವಿಶ್ವಸಂಸ್ಥೆಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಕಾರಣ. ಹೀಗೆ ಭಾರತದ ಯೋಗ ಕಳೆದ ಎಂಟು ವರ್ಷಗಳಿಂದ ವಿಶ್ವಪಥದಲ್ಲಿ ಗೋಚರಿಸಿ ಇಂದು ಜನಪ್ರಿಯವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ. ಕೋಟ್ಯಾನ್, ದೈಹಿಕ ಶಿಕ್ಷಣ ನಿರ್ದೇಶಕಿ ಆಶಾ, ಎನ್.ಎಸ್.ಎಸ್ ಯೋಜನಾಧಿಕಾರಿ ಸುಚಿತ್ರಾ, ನವೀನ್ ಇದ್ದರು.

ಸಾಣೂರು: ತಾಲ್ಲೂಕಿನ ಸಾಣೂರು ಗ್ರಾಮ ಪಂಚಾಯಿತಿ ಸುವರ್ಣ ಗ್ರಾಮೋದಯ ಸೌಧದಲ್ಲಿ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಸಂಘಟನೆ ಉಡುಪಿ, ಗ್ರಾಮ ಪಂಚಾಯಿತಿ ಸಾಣೂರು ಹಾಗೂ ಯುವಕ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಉದ್ಘಾಟಿಸಿದ ಪ್ರವೀಣ ಶೆಟ್ಟಿ ಮಾತನಾಡಿ ಬಾಹ್ಯ ಮತ್ತು ಆಂತರಿಕ ಸೌಂದರ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಯೋಗವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

ಕರುಣಾಕರ್ ಎಸ್. ಕೋಟ್ಯಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು ಎಂ. ಸಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅರುಣಿ, ಜಗದೀಶ್ ಕುಮಾರ್, ಪ್ರಕಾಶ್ ಮಡಿವಾಳ, ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಇದ್ದರು. ಯೋಗ ಗುರು ಬಾಲಕೃಷ್ಣ ರೆಖ್ಯ ಯೋಗಾಸನಗಳ ಪ್ರದರ್ಶನ ನಡೆಸಿದರು.

ನಿಟ್ಟೆ ತಾಂತ್ರಿಕ ಕಾಲೇಜು: ತಾಲ್ಲೂಕಿನ ನಿಟ್ಟೆಯ ತಾಂತ್ರಿಕ ಕಾಲೇಜಿನ ಯೋಗದಿನಾಚರಣೆಯಲ್ಲಿ 854 ಮಂದಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಯೋಗಾಭ್ಯಾಸದ ಮಹತ್ವ
ವನ್ನು ತಿಳಿಸಿದರು. ಸಂಯೋಜಕ ಡಾ.ಅಜಿತ್ ಹೆಬ್ಬಾಳೆ, ಉಪಪ್ರಾಂಶು
ಪಾಲ ಡಾ.ಐ.ಆರ್ ಮಿತ್ತಂತಾಯ, ಡಾ. ಶ್ರೀನಿವಾಸ್ ರಾವ್ ಬಿ.ಆರ್, ನಿಟ್ಟೆ ವಿವಿಧ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ವೀಣಾ ಬಿ.ಕೆ, ಪ್ರಶಾಂತ್ ಕುಮಾರ್ ಕೆ, ಭವಾನಿ ಶೆಟ್ಟಿ, ಡಾ. ವಿಶ್ವನಾಥ, ಡಾ. ವೀಣಾದೇವಿ ಶಾಸ್ತ್ರೀಮಠ್, ಯುಜ್ ಫಾರ್ ಲೆಯನ ವಿದ್ಯಾಥಿ೯ ನಾಯಕಿ ಶ್ರೀವಾಣಿ ಬಾಯರಿ, ಸಹಪ್ರಾಧ್ಯಾಪಕ ಡಾ. ಸರ್ವಜಿತ್ ಇದ್ದರು.

ನಂದಳಿಕೆ: ತಾಲ್ಲೂಕಿನ ನಂದಳಿಕೆ ಅಬ್ಬನಡ್ಕ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನೆಹರೂ ಯುವ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕ್ಲಬ್‌ನ ರಂಗಮಂದಿರದಲ್ಲಿ ಆಚರಿಸಲಾದ ವಿಶ್ವ ಯೋಗ ದಿನಾಚರಣೆಯಲ್ಲಿ ಲಲಿತಾ ಆಚಾರ್ಯ ಮತ್ತು ನಿಯಾ ಶೆಟ್ಟಿ ಯೋಗ ತರಬೇತಿ ನೀಡಿದರು. ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಚಾಲಕ ಸಂದೀಪ್ ವಿ. ಪೂಜಾರಿ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಪದ್ಮಶ್ರೀ ಪೂಜಾರಿ, ಮಂಜುನಾಥ ಆಚಾರ್ಯ, ಕೀರ್ತನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT